ಈ ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಬದಲಾಗುವುದಂತೆ ಅದೃಷ್ಟ
ವಾಸ್ತು ಪ್ರಕಾರ, ಆಮೆಯನ್ನು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಮನೆಯಲ್ಲಿ ಆಮೆ ಇಡುವುದು ಶುಭ ಎಂದು ಹೇಳಲಾಗುತ್ತದೆ. ಹೀಗೆ ಮಾಡಿದರೆ ಲಕ್ಷ್ಮೀ ದೇವಿ ಸದಾ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ನಿಮ್ಮ ಅದೃಷ್ಟ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮೀನುಗಳನ್ನು ಇಡುವುದು ಮಂಗಳಕರ. ಮೀನನ್ನು ಸಾಕುವುದರಿಂದ ಮನೆಯ ಋಣಾತ್ಮಕ ಶಕ್ತಿ, ದಾರಿದ್ರ್ಯ ನಿವಾರಣೆಯಾಗಿ, ಧನಾತ್ಮಕ ಶಕ್ತಿ ನೆಲೆಸುತ್ತದೆ ಎನ್ನುವುದು ನಂಬಿಕೆ. ವಾಸ್ತು ಶಾಸ್ತ್ರದ ಪ್ರಕಾರ ಚಿನ್ನದ ಬಣ್ಣದ ಮೀನುಗಳನ್ನು ಸಾಕುವುದು ಶುಭ.
ಇದಲ್ಲದೆ, ಮನೆಯಲ್ಲಿ ಮೊಲವನ್ನು ಸಾಕಿದರೆ ಕೂಡಾ ಶುಭ. ಮೊಲವನ್ನು ಮನೆಯ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಮನೆಯ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿಯು ನೆಲೆಸುತ್ತದೆ.
ಮನೆಯಲ್ಲಿ ಕುದುರೆಯನ್ನು ಸಾಕುವುದು ಬಹಳ ವಿರಳ. ಕುದುರೆ ಸಾಕುವುದಕ್ಕೆ ಬದಲಾಗಿ ಮನೆಯಲ್ಲಿ ಕುದುರೆ ಅಥವಾ ಓಡುವ ಕುದುರೆಯ ಫೋಟೋ ಹಾಕಬಹುದು. ಹೀಗಾದರೂ ಅದೃಷ್ಟ ತೆರೆದುಕೊಳ್ಳುತ್ತದೆ.
ಜ್ಯೋತಿಷ್ಯದ ಪ್ರಕಾರ ನಾಯಿ ಪ್ರಮುಖ ಪ್ರಾಣಿ. ನಾಯಿ ಸಾಕುವುದರಿಂದ ಜೀವನದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಜಾತಕದಲ್ಲಿ ಶನಿ ಮತ್ತು ಕೇತುವನ್ನು ಬಲಪಡಿಸಲು ಕಪ್ಪು ನಾಯಿ ಮಂಗಳಕರ ಎನ್ನಲಾಗಿದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.)