ತುಳಸಿ-ಮನಿ ಪ್ಲಾಂಟ್ ನಂತೆಯೇ ಈ ಸಸ್ಯಗಳು ಕೂಡಾ ಹೊತ್ತು ತರುತ್ತವೆ ಅದೃಷ್ಟ

Mon, 06 Jun 2022-5:36 pm,

ಗರಿಕೆ ಗಣೇಶನಿಗೆ ತುಂಬಾ ಪ್ರಿಯ. ಮನೆಯಲ್ಲಿ ಇದನ್ನೂ ನೆಟ್ಟರೆಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ  ಗರಿಕೆಗೆ ನೀರನ್ನು ಅರ್ಪಿಸಿ ಮತ್ತು ಗಣಪತಿಗೆ ಅರ್ಪಿಸುವುದರಿಂದ ಅದೃಷ್ಟವು ತೆರೆದುಕೊಳ್ಳುತ್ತದೆ  ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದಲ್ಲಿ ಸ್ನೇಕ್  ಪ್ಲಾಂಟ್ ಅನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯವು ಪ್ರಗತಿಯ ಹಾದಿಯನ್ನು ತೆರೆಯುತ್ತದೆ. ಇದನ್ನು ಸ್ಟಡಿ ರೂಂ ಅಥವಾ ಲಿವಿಂಗ್ ರೂಮಿನಲ್ಲಿ ಇಡುವುದು ತುಂಬಾ ಒಳ್ಳೆಯದು. ಈ ಸಸ್ಯವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.   

ಮನೆಯಲ್ಲಿ ತೆಂಗಿನ ಮರವನ್ನು ನೆಡುವುದು ತುಂಬಾ ಶುಭ. ಇದು ಮನೆಯ ಜನರಿಗೆ ಹಗಲು ರಾತ್ರಿ ನಾಲ್ಕು ಪಟ್ಟು ಪ್ರಗತಿಯನ್ನು ನೀಡುತ್ತದೆ

ವಾಸ್ತು ಶಾಸ್ತ್ರದಲ್ಲಿ,  ಮುಟ್ಟಿದರೆ ಮುನಿ  ಸಸ್ಯವನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟು ಪ್ರತಿನಿತ್ಯ ನೀರು ಹಾಕುವುದರಿಂದ ಜಾತಕದಲ್ಲಿರುವ ರಾಹುದೋಷ ನಿವಾರಣೆಯಾಗುತ್ತದೆ. ಹಣಕಾಸಿನ ನಷ್ಟ, ಪ್ರಗತಿಯಲ್ಲಿನ ಅಡೆತಡೆಗಳು, ರೋಗಗಳು, ಸಂಬಂಧಗಳಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.   

ಬಾಳೆ ಗಿಡ ವಿಷ್ಣುವಿಗೆ ಬಹಳ ಪ್ರಿಯವಾಗಿದೆ. ಇದು ಗುರು ಗ್ರಹಕ್ಕೆ ಸಂಬಂಧಿಸಿದೆ. ಜ್ಯೋತಿಷ್ಯದಲ್ಲಿ ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು ಮಂಗಳಕರಾಗಿದ್ದರೆ, ವ್ಯಕ್ತಿಯ ಅದೃಷ್ಟವು ಬಲವಾಗಿರುತ್ತದೆ. ಎಲ್ಲಾ ಕೆಲಸಗಳು  ಸಾಂಗವಾಗಿ ನೆರವೇರುತ್ತದೆ. 

ಲಕ್ಷ್ಮಣ ಸಸ್ಯವು ಲಕ್ಷ್ಮಿ ದೇವಿಗೆ ಸಂಬಂಧಿಸಿದ್ದಾಗಿದೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಸಂಪತ್ತು ತುಂಬಿರುತ್ತದೆ. ಈ ಗಿಡವನ್ನು ಮನೆಯ ಪೂರ್ವ ಅಥವಾ ಪೂರ್ವ-ಉತ್ತರ ದಿಕ್ಕಿನಲ್ಲಿ ನೆಡುವುದು ಶುಭ ಎನ್ನಲಾಗಿದೆ.  

(ಸೂಚನೆ : ಈ ಮೇಲಿನ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link