ಮನೆಯ ಸುತ್ತ ಈ ಸಸ್ಯಗಳಿದ್ದರೆ ಸಿಗುತ್ತದೆ ಪಾಸಿಟಿವ್ ಎನರ್ಜಿ ! ಪ್ರಾಪ್ತಿಯಾಗುತ್ತದೆ ಧನ ಸಂಪತ್ತು

Fri, 08 Apr 2022-4:44 pm,

ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್‌ಗೆ ವಿಶೇಷ ಮಹತ್ವವಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ  ಹಣವು ಹೆಚ್ಚಾಗಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ. ಮುಖ್ಯ ದ್ವಾರದ ಬಳಿ ಮನಿ ಪ್ಲಾಂಟ್ ಇಡಬಹುದು.  ಮನೆಯೊಳಗೆ ಅದನ್ನು ಗಾಜಿನ ಬಾಟಲಿಯಲ್ಲಿ ಕೂಡಾ ಇದನನ್ನು ನೆಡಬಹುದು. 

ವಾಸ್ತು ಶಾಸ್ತ್ರದಲ್ಲಿ, ಅರಿಶಿನವನ್ನು ಸಂತೋಷ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಹಣದ ಕೊರತೆ ದೂರವಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಈ ಸಸ್ಯವು ಆಸೆ ಆಕಾಂಕ್ಷೆಗಳ ಈಡೇರಿಕೆಗೆ ಸಹಕಾರಿಯಾಗಿದೆ. ಇದಲ್ಲದೆ, ಇದು ಮನೆಯ ನಕಾರಾತ್ಮಕ ಶಕ್ತಿಯನ್ನು ಸಹ ತೆಗೆದುಹಾಕುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಶಮಿ ಸಸ್ಯವು ತುಂಬಾ ಮಂಗಳಕರವಾಗಿದೆ ಮತ್ತು ಸಂತೋಷ, ಸಮೃದ್ಧಿಯನ್ನು ನೀಡುತ್ತದೆ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಧನಾತ್ಮಕ ಶಕ್ತಿ ಹರಡುತ್ತದೆ. ಇದರೊಂದಿಗೆ ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಶನಿ ಕಾಟದಿಂದಲೂ ಪರಿಹಾರ ಸಿಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮೀ ದೇವಿಯು ತುಳಸಿಯಲ್ಲಿ ನೆಲೆಸಿದ್ದಾಳೆ. ತುಳಸಿ ಗಿಡ ನೆಟ್ಟ ಮನೆಯಲ್ಲಿಲಕ್ಷ್ಮೀ ದೇವಿ ಸದಾ ನೆಲೆಸುತ್ತಾಳೆ. ಇದರೊಂದಿಗೆ ತುಳಸಿ ಗಿಡ ಶನಿ ದೋಷ ನಿವಾರಣೆಗೆ ಸಹಕಾರಿಯಾಗಿದೆ. 

ವಾಸ್ತು ಶಾಸ್ತ್ರದ ಪ್ರಕಾರ, ಬಿದಿರಿನ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಬಿದಿರಿನ ಗಿಡಗಳನ್ನು ಕೆಂಪು ರಿಬ್ಬನ್‌ನಿಂದ ಕಟ್ಟಬೇಕು ಎಂದು ಹೇಳಲಾಗುತ್ತದೆ. ಇದನ್ನು ಮನೆಯ ಉತ್ತರ ದಿಕ್ಕಿಗೆ ಇಡುವುದು ಶುಭ.  

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link