IPL 2024ರಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ ಈ ಆಟಗಾರು ! ಪಟ್ಟಿಯಲ್ಲಿದ್ದಾರೆ ಐಪಿಎಲ್ ಹೀರೋಗಳು !
ಹಾರ್ದಿಕ್ ಪಾಂಡ್ಯ ಅವರ ಪಾದದ ಗಾಯದ ಸಮಸ್ಯೆ ಮುಂಬೈ ಇಂಡಿಯನ್ಸ್ ಅನ್ನು ಕಾಡುತ್ತಿದೆ. ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ ಆಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಪಾದದ ಗಾಯದಿಂದಾಗಿ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರ ಹೊತ್ತಿಗೆ ಫಿಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಎಷ್ಟರ ಮಟ್ಟಿಗೆ ನಿಜವಾಗಲಿದೆ ನೋಡಬೇಕಾಗಿದೆ.
ಮೊಹಮ್ಮದ್ ಶಮಿ ಗಾಯಗೊಂಡಿರುವುದು ಗುಜರಾತ್ ಟೈಟನ್ಸ್ ಚಿಂತೆಗೆ ಕಾರಣವಾಗಿದೆ. ಮೊಹಮ್ಮದ್ ಶಮಿ ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. 2024ರ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿಯೂ ಮೊಹಮ್ಮದ್ ಶಮಿ ಆಡುವುದು ಕಷ್ಟ. ಶಮಿ ಐಪಿಎಲ್ 2024ರಲ್ಲೂ ಆಡುವುದು ಖಚಿತ ಎಂದು ಹೇಳುವುದು ಸಾಧ್ಯವಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಸೂರ್ಯಕುಮಾರ್ ಯಾದವ್ ಅವರು ಊರುಗೋಲನ್ನು ಹಿಡಿದುಕೊಂಡು ನಡೆದಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಸೂರ್ಯಕುಮಾರ್ ಯಾದವ್ ಅವರ ಚೇತರಿಕೆ ನಿಧಾನವಾಗಿದ್ದು, IPL 2024ರಲ್ಲಿ ಆಡುತ್ತಾರೆಯೇ ಇಲ್ಲವೇ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಮಹೇಂದ್ರ ಸಿಂಗ್ ಧೋನಿ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ಇದರಿಂದ ತೊಂದರೆ ಅನುಭವಿಸಿರುವುದು ಕಂಡುಬಂದಿತ್ತು. ಸೀಸನ್ ಕೊನೆಗೊಂಡಾಗ, ಮತ್ತೆ ಐಪಿಎಲ್ ಗೆ ಮರಳುತ್ತಾರೆಯೇ ಎನ್ನುವ ಪ್ರಶ್ನೆ ಹಾಕಿದಾಗ ದೇಹ ಯಾವ ರೀತಿ ಪ್ರತಿಕ್ರಿಸುತ್ತದೆ ಎನ್ನುವುದರ ಮೇಲೆ ಅದು ನಿರ್ಧಾರವಾಗುತ್ತದೆ ಎಂದಿದ್ದರು.
ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ಅಫ್ಘಾನಿಸ್ತಾನದ ಫಾಸ್ಟ್ ಬೌಲರ್ ನವೀನ್-ಉಲ್-ಹಕ್ ಗಾಯಗೊಂಡಿಲ್ಲ. ಆದರೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಐಪಿಎಲ್ ಟಿ 20 ಲೀಗ್ ಮೇಲೆ ಪ್ರತಿಬಂಧ ಹೇರಿರುವ ಕಾರಣ ಐಪಿಎಲ್ 2024 ಪಂದ್ಯಾವಳಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳಬಹುದು.