IND vs NZ Test series: ನ್ಯೂಜಿಲೆಂಡ್ ವಿರುದ್ಧ ಸಿಡಿಯಲು ಸಜ್ಜಾಗಿದ್ದಾರೆ ಈ ಆಟಗಾರರು..!

Tue, 23 Nov 2021-3:35 pm,

ಟೀಂ ಇಂಡಿಯಾದ ಸ್ಟಾರ್ ಓಪನಿಂಗ್ ಬ್ಯಾಟ್ಸ್ ಮನ್, ಕನ್ನಡಿಗ ಕೆ.ಎಲ್.ರಾಹುಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ರನ್ ಗಳ ಮಳೆಯನ್ನೇ ಸುರಿಸುತ್ತಿರುವ ಈ ಆಟಗಾರ ಟೀಂ ಇಂಡಿಯಾದ ಭರವಸೆಯ ಆಟಗಾರನೆಂದು ಗುರುತಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಾಹುಲ್ ದೊಡ್ಡ ಇನ್ನಿಂಗ್ಸ್ ಕಟ್ಟಲು ಬಯಸುತ್ತಾರೆ. ಬ್ಯಾಟಿಂಗ್ ಜೊತೆಗೆ ವೇಗವಾಗಿ ರನ್ ಗಳಿಸುವುದರಲ್ಲಿಯೂ ರಾಹುಲ್ ಕ್ಲಾಸ್ ಪರಿಣಿತ ಆಟಗಾರ. ನ್ಯೂಜಿಲೆಂಡ್ ವಿರುದ್ಧ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ರವೀಂದ್ರ ಜಡೇಜಾ ಭಾರತಕ್ಕೆ ಅತ್ಯಂತ ಉಪಯುಕ್ತ ಆಟಗಾರ. ಜಡೇಜಾ ಅತ್ಯುತ್ತಮ ಬ್ಯಾಟಿಂಗ್‌ನೊಂದಿಗೆ ಮಾರಣಾಂತಿಕ ಬೌಲಿಂಗ್‌ ಕೂಡ ಮಾಡಬಲ್ಲರು. ಜಡೇಜಾ ಅವರ ಆಲ್ ರೌಂಡರ್ ಪ್ರದರ್ಶನವು ಟೀಂ ಇಂಡಿಯಾಗೆ ಅನೇಕ ಗೆಲುವುಗಳನ್ನು ತಂದುಕೊಟ್ಟಿದೆ. ನಿಧಾನಗತಿಯ ಎಸೆತಗಳಲ್ಲಿ ಬೇಗನೆ ವಿಕೆಟ್‌ಗಳನ್ನು ಕಬಳಿಸುತ್ತಾರೆ. ಜಡೇಜಾ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿಯೂ ಪರಿಣಿತ ಆಟಗಾರನಾಗಿದ್ದಾರೆ. ಕಿವೀಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್‌ ನಲ್ಲಿ ಅತ್ಯಂತ ಮಾರಕ ಬೌಲಿಂಗ್ ಪ್ರದರ್ಶನ ನೀಡುತ್ತಾರೆ. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಸಹಾಯಕವಾಗಿವೆ. ಹೀಗಿರುವಾಗ ಅಶ್ವಿನ್ ಎಸೆತಗಳ ಮ್ಯಾಜಿಕ್ ಎಲ್ಲರಿಗೂ ಗೊತ್ತೇ ಇದೆ. ಯಾವುದೇ ಬ್ಯಾಟ್ಸ್‌ ಮನ್ ಇವರ ಬೌಲಿಂಗ್ ಅನ್ನು ಎದುರಿಸುವುದು ಸುಲಭವಲ್ಲ. ಅಶ್ವಿನ್ ಅವರು ಕಳೆದ 5 ಟಿ-20 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದು, ಅತ್ಯಂತ ಕಡಿಮೆ ರನ್ ನೀಡಿದ್ದಾರೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಅಶ್ವಿನ್ ನ್ಯೂಜಿಲೆಂಡ್ ತಂಡಕ್ಕೆ ಅಪಾಯ ಎಂಬುವುದರಲ್ಲಿ ಎರಡು ಮಾತಿಲ್ಲ.  

ಶ್ರೇಯಸ್ ಅಯ್ಯರ್ ಮೊದಲ ಬಾರಿಗೆ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಬ್ಯಾಟ್ಸ್‌ ಮನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಶ್ರೇಯಸ್ ಬ್ಯಾಟಿಂಗ್ ಲಯದಲ್ಲಿದ್ದಾಗ ಬೌಲರ್‌ಗಳನ್ನು ಮನಬಂದಂತೆ ದಂಡಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ ಅಯ್ಯರ್ ODI ಮತ್ತು T20 ಗಳಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಅವರು ಟೆಸ್ಟ್‌ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.     

ಆರ್‌ಸಿಬಿ ಪರ ಆಡುತ್ತಿರುವ ಈ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ಮೊದಲ ಬಾರಿಗೆ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರತ್ ಆರ್‌ಸಿಬಿ ಪರ 8 ಪಂದ್ಯಗಳಲ್ಲಿ 191 ರನ್ ಗಳಿಸಿದ್ದಾರೆ. ಭರತ್ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ತುಂಬಾ ಆಕ್ರಮಣಕಾರಿ ಬ್ಯಾಟ್ಸ್‌ ಮನ್ ಆಗಿರುವ ಅವರು ನ್ಯೂಜಿಲೆಂಡ್ ವಿರುದ್ಧ ಮಿಂಚುವ ಸಾಧ್ಯತೆ ಇದೆ. ಭರತ್ ರಣಜಿ ಟ್ರೋಫಿಯಲ್ಲಿ ತ್ರಿವಳಿ ಶತಕ ಭಾರಿಸಿದ ದಾಖಲೆ ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link