1st December Changes: ಇಂದು ಮಧ್ಯ ರಾತ್ರಿಯಿಂದಲೇ ಜಾರಿಯಾಗಲಿವೆ 5 ಬದಲಾವಣೆಗಳು, ನಿಮ್ಮ ಜೇಬಿನ ಮೇಲೆ ನೇರ ಪ್ರಭಾವ

Wed, 30 Nov 2022-9:50 pm,

1. ಡಿಸೆಂಬರ್‌ನಲ್ಲಿ ಹೆಚ್ಚುತ್ತಿರುವ ಮಂಜಿನಿಂದಾಗಿ ರೈಲ್ವೆ ಹಲವು ಬದಲಾವಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ, ಅನೇಕ ರೈಲುಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ರೈಲ್ವೆಯು ಡಿಸೆಂಬರ್ 2022 ರಿಂದ ಮುಂದಿನ ವರ್ಷ ಮಾರ್ಚ್ ವರೆಗೆ ಸುಮಾರು 50 ರೈಲುಗಳನ್ನು ರದ್ದುಗೊಳಿಸಿದೆ.  

2. ಪಿಂಚಣಿದಾರರಿಗೆ ಒಂದು ಮಹತ್ವದ ಮಾಹಿತಿ. ಪಿಂಚಣಿದಾರರ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ 30 ನವೆಂಬರ್ 2022 ಆಗಿದೆ. ಅಂದರೆ ನಾಳೆಯಿಂದ ಅವರು ಜೀವನ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಿಲ್ಲ. ನೀವು ನಿಮ್ಮ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ ನಿಮ್ಮ ಪಿಂಚಣಿಯನ್ನು ಸಹ ನಿಂತುಹೋಗಬಹುದು. ಹೀಗಾಗಿ ಇಂದೇ ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು.  

3. ಗಮನಾರ್ಹವಾಗಿ, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೆಯ ದಿನದಂದು ಪರಿಶೀಲಿಸಲಾಗುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ 1 ರಿಂದ ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಯಲ್ಲಿ ಬದಲಾವಣೆಯಾಗಬಹುದು.  

4. ಡಿಸೆಂಬರ್ 1 ರಿಂದ ಪಿಎನ್‌ಬಿ ಗ್ರಾಹಕರಿಗೆ ಪಾಲಿಗೆ ಒಂದು ದೊಡ್ಡ ಬದಲಾವಣೆಯಾಗುತ್ತಿದೆ.ಡಿಸೆಂಬರ್ 1 ರಿಂದ, PNB ATM ನಿಂದ ಹಣವನ್ನು ಹಿಂತೆಗೆದುಕೊಳ್ಳುವ ವಿಧಾನ ಬದಲಾಗುವ ಸಾಧ್ಯತೆ ಇದೆ. ಈಗ ಯಂತ್ರದಲ್ಲಿ ಕಾರ್ಡ್ ಅನ್ನು ಸೇರಿಸಿದಾಗ, ನೀವು ಫೋನ್‌ನಲ್ಲಿ OTP ಅನ್ನು ಪಡೆಯುವಿರಿ, ಓಟಿಪಿ ನಮೂದಿಸಿದ ನಂತರವೇ ನೀವು ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಗ್ರಾಹಕರು ಅದರ ಬಗ್ಗೆ ತಿಳಿದುಕೊಳ್ಳಬೇಕು.  

5. ನಾಳೆಯಿಂದ ಆಗುವ ಬದಲಾವಣೆಗಳಲ್ಲಿ ಥರ್ಡ್ ಪಾರ್ಟಿ ವಿಮೆಗೆ ಸಂಬಂಧಿಸಿದ ಶುಲ್ಕಗಳ ಹೆಚ್ಚಳ ಕೂಡ ಶಾಮೀಲಾಗಿದೆ. ಆದರೆ, ಈ ಹೆಚ್ಚಳವು ತುಂಬಾ ಮಾಮೂಲಿಯಾಗಿರಲಿದೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link