ಜೀವನದಲ್ಲಿ ಘಟಿಸುವ ಈ ಐದು ಘಟನೆಗಳು ನೀಡುತ್ತದೆ ಧನಾಗಮನದ ಸಂಕೇತ
ಮನೆಯ ಮುಖ್ಯ ದ್ವಾರದ ಎದುರು ಎಕ್ಕದ ಗಿಡ ತಾನಾಗಿಯೇ ಬೆಳೆದರೆ, ಅದು ಜೀವನದಲ್ಲಿ ಧನಾಗಮನವಾಗುವ ಸಂಕೇತವಾಗಿರುತ್ತದೆ. ಈ ಸಸ್ಯವು ಉತ್ತಮ ಭವಿಷ್ಯವನ್ನು ಸೂಚಿಸುತ್ತದೆ.
ಬಿಳಿ ಬಣ್ಣದ ಹಸು ಮನೆಯ ಹೊರಗೆ ಬಂದು ಸಗಣಿ ಹಾಕಿದರೆ, ಸುಖಕರ ಭವಿಷ್ಯ ಎದುರಿಗಿದೆ ಎನ್ನುವ ಮುನ್ಸೂಚನೆಯಾಗಿದೆ.
ಯಾವುದೇ ಒಂದು ವಿಶೇಷ ಕಾರ್ಯಗಳಿಗಾಗಿ ಮನೆಯಿಂದ ಹೊರ ನಡೆಯುತ್ತಿದ್ದಾಗ ಯಾರ ಕೈಯ್ಯಲ್ಲಿಯಾದರೂ, ತುಂಬಿದ ಕಲಶ ಕಂಡರೆ ನೀವು ಹೊರಗೆ ಹೋಗುತ್ತಿರುವ ಕೆಲಸ ಯಶಸ್ವಿಯಾಗಲಿದೆ ಎಂದರ್ಥ.
ನಿಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳು ಇದ್ದಕ್ಕಿದ್ದಂತೆ ಚಿಲಿಪಿಲಿ ಗುಟ್ಟಲು ಪ್ರಾರಂಭಿಸಿದರೆ, ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಪ್ರಾರಂಭವಾಗಲಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆ ಗುಬ್ಬಚ್ಚಿಗಳನ್ನು ಸ್ವಾಗತಿಸಲು ನೀವು ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿದರೆ ಇನ್ನೂ ಒಳ್ಳೆಯದು.
ನೀವು ಹಾಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಹಣ ಬಿದ್ದಿರುವುದು ಕಂಡರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.