ಮೈ ಮೇಲೆ ಈ ಲಕ್ಷಣಗಳು ಕಾಣಿಸಿಕೊಂಡಿದೆಯಾ ? ಹಾಗಿದ್ದರೆ ಖಂಡಿತವಾಗಿಯೂ ಶುಗರ್ ಹೆಚ್ಚಾಗಿದೆ ಎಂದರ್ಥ
ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮಂಡಿಯ ಚರ್ಮದ ಮೇಲೆ ಸಣ್ಣ ಕಪ್ಪು ಮತ್ತು ಕಂದು ಬಣ್ಣದ ಗಾಯಗಳು ಕಾಣಿಸಿಕೊಳ್ಳುತ್ತವೆ.ಈ ಚಿಹ್ನೆಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಬೇಡಿ.
ದೇಹದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾದಾಗ,ಚರ್ಮದ ಮೇಲೆ ಗಾಯಗಳು ಮತ್ತು ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.ಈ ಗಾಯಗಳು ಬೇಗ ವಾಸಿಯಾಗುವುದಿಲ್ಲ.
ಯಾವುದೇ ಕಾರಣವಿಲ್ಲದೆ ಚರ್ಮದ ಮೇಲೆ ಸಣ್ಣ ದದ್ದುಗಳು ಕಾಣಿಸಿಕೊಂಡರೆ ಅದು ಅಧಿಕ ರಕ್ತದ ಸಕ್ಕರೆಯನ್ನು ಸೂಚಿಸುತ್ತವೆ.
ಚರ್ಮದ ಮೇಲೆ ನೇರಳೆ,ಕೆಂಪು,ಕಂದು ಅಥವಾ ಹಳದಿ ಗುರುತುಗಳು ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ.ಆ ಚಿಹ್ನೆಗಳು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು.
ಪದೇ ಪದೇ ಫಂಗಲ್ ಇನ್ಫೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಅದು ಮಧುಮೇಹದ ಚಿಹ್ನೆಯಾಗಿರಬಹುದು.ಇದರಿಂದ ಚರ್ಮದ ಮೇಲೆ ತುರಿಕೆ ಕಾಣಿಸಿಕೊಳ್ಳಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.