ತಮ್ಮ ತಾಯಿಯ ಡಿಟ್ಟೋ Carbon Copy ಆಗಿದ್ದಾರೆ ಈ ಬಾಲಿವುಡ್ ನಟಿಮಣಿಯರು

Tue, 01 Sep 2020-8:06 pm,

ಬಾಲಿವುಡ್ ನಲ್ಲಿ ತಾಯಿ-ಮಗಳ ಜೋಡಿ ಬಗ್ಗೆ ಹೇಳುವುದಾದರೆ ಈ ಪಟ್ಟಿಯಲ್ಲಿ ಶರ್ಮಿಲಾ ಟ್ಯಾಗೋರ್ ಹಾಗೂ ಸೋಹಾ ಅಲಿ ಖಾನ್ ನಂಬರ್ 1. ಸ್ಥಾನದಲ್ಲಿದ್ದು, ಡಿಟ್ಟೋ ಕಾರ್ಬನ್ ಕಾಪಿಯಾಗಿದ್ದಾರೆ.

ಇದೆ ಪಟ್ಟಿಯಲ್ಲಿ ಪಟೌಡಿ ಕುಟುಂಬದ ಮತ್ತೋರ್ವ ತಾಯಿ-ಮಗಳ ಜೋಡಿ ಶಾಮೀಲಾಗಿದೆ. ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್ ಡಿಟ್ಟೋ ತನ್ನ ಅಮೃತಾ ಸಿಂಗ್ ಅವರ ಕಾರ್ಬನ್ ಕಾಪಿಯಾಗಿದ್ದಾರೆ.

ಚಲನಚಿತ್ರ ವೃತ್ತಿಜೀವನದಲ್ಲಿ ಸಾಕಷ್ಟು ಹೆಸರು ಗಳಿಸಿದ ನಾಯಕಿಯರ ಪಟ್ಟಿಯಲ್ಲಿ ಡಿಂಪಲ್ ಕಪಾಡಿಯಾ ಹೆಸರು ಯಾವಾಗಲೂ ಮುಂದಿದೆ, ಡಿಂಪಲ್ 31 ವರ್ಷದ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರನ್ನು 16 ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಅವರ ಮಗಳು ಟ್ವಿಂಕಲ್ ಖನ್ನಾ ಸಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ತಾಯಿಯಂತೆ ಅವರು ಅಷ್ಟೊಂದು ಯಶಸ್ವಿಯಾಗಲಿಲ್ಲ.  ಟ್ವಿಂಕಲ್ ಕೂಡ ತನ್ನ ತಾಯಿಯನ್ನು ಹೋಲುತ್ತಾರೆ.

ಒಂದು ಕಾಲದಲ್ಲಿ ಪ್ರಸಿದ್ದಿಯ ಉತ್ತುಂಗಕ್ಕೆ ಏರಿದ ನಟಿ ಹೇಮಾ ಮಾಲಿನಿ.  ತನ್ನ ಚಲನಚಿತ್ರ ವೃತ್ತಿಜೀವನದಲ್ಲಿ ಅವರು ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಆದರೆ ಅವರ ಮಗಳು ಇಶಾ ಡಿಯೋಲ್ ತನ್ನ ತಾಯಿಯಂತೆ ವಿಶೇಷ ಸ್ಥಾನಮಾನವನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇಶಾಳ ಮುಖ ತಾಯಿ ಹೇಮಾ ಮಾಲಿನಿಯ ಮುಖಕ್ಕೆ ಹೋಲುತ್ತದೆ.

ಹಿರಿಯ ಬಾಲಿವುಡ್ ನಟಿ ಪೂಜಾ ಬೇಡಿ ಕೂಡ ತನ್ನ ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದರು.  ಅವರ ಪುತ್ರಿ ಅಲಾಯಾ ಫರ್ನಿಚರ್ ವಾಲಾ ಕೂಡ ಇತ್ತೀಚೆಗಷ್ಟೇ ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಲಾಯಾ ಕೂಡ ತಮ್ಮ ತಾಯಿಯ ಕಾರ್ಬನ್ ಕಾಪಿ ಆಗಿದ್ದಾರೆ.

ಸಾರಿಕಾ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನು ವರಿಸಿದ್ದರು . ಒಂದು ಕಾಲದಲ್ಲಿ ಸಾರಿಕಾ ಕೂಡ ಅತ್ಯುತ್ತಮ ನಟಿಯಾಗಿದ್ದರು. ಸಾರಿಕಾ ಅವರ ಪುತ್ರಿ ಶ್ರುತಿ ಹಾಸನ್ ಕೂಡ ನಟಿಯಾಗಿದ್ದಾರೆ. ನಟಿಯಾಗುವುದರ ಜೊತೆಗೆ ಶ್ರುತಿ ಓರ್ವ ಗಾಯಕಿಯೂ ಆಗಿದ್ದಾಳೆ. ಇತ್ತೀಚೆಗಷ್ಟೇ ಶ್ರುತಿ ತನ್ನ ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಶೃತಿ ಕೂಡ ತನ್ನ ತಾಯಿಯ ತದ್ರೂಪಿಯಂತೆ ಕಾಣುತ್ತಾಳೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link