Good Luck Tips: ದುರಾದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸುತ್ತೆ ಈ ಸಣ್ಣ ಕೆಲಸ
ಈ ಗ್ರಹಗಳು ಬಲವಾಗಿರಬೇಕು: ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯಲು, ಕೆಲವು ಗ್ರಹಗಳು ಜಾತಕದಲ್ಲಿ ಬಲವಾಗಿರುವುದು ಬಹಳ ಮುಖ್ಯ. ಇದರಲ್ಲಿ, ಸೂರ್ಯ ಮತ್ತು ಗುರು ಪ್ರಮುಖರು. ಏಕೆಂದರೆ ಈ ಎರಡೂ ಗ್ರಹಗಳು ಶಕ್ತಿ-ವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಯಶಸ್ಸು ಮತ್ತು ಗೌರವವನ್ನು ತರುತ್ತಾರೆ ಎಂದು ಹೇಳಲಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ಮತ್ತು ಗುರುಗಳನ್ನು ಬಲಪಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕಾರಣದಿಂದಾಗಿ, ಜಾತಕದ ಈ ದುರ್ಬಲ ಗ್ರಹಗಳು ಸಹ ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ. ಭಾನುವಾರ ಮತ್ತು ಗುರುವಾರದಂದು ಈ ಗ್ರಹಗಳಿಗೆ ಪರಿಹಾರಗಳನ್ನು ಮಾಡುವುದು ವಿಶೇಷವಾಗಿದೆ.
ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು, ಗುರು ಗ್ರಹದ ಅನುಗ್ರಹವು ಬಹಳ ಮುಖ್ಯವಾಗಿದೆ. ಸ್ನಾನದ ನೀರಿನಲ್ಲಿ ಪ್ರತಿದಿನ ಒಂದು ಚಿಟಿಕೆ ಅರಿಶಿನ ಬೆರೆಸಿ, ಅದು ಗುರು ಗ್ರಹವನ್ನು ಬಲಪಡಿಸುತ್ತದೆ. ಇದರೊಂದಿಗೆ ಭಗವಾನ್ ವಿಷ್ಣುವಿನ ಅನುಗ್ರಹವೂ ಲಭ್ಯವಾಗಲಿದೆ.
ಇದನ್ನೂ ಓದಿ- Feng Shui Tips: ನಿಮ್ಮ ಪ್ರತಿ ಆಸೆಯನ್ನೂ ಪೂರೈಸಬಲ್ಲದು ನಿಮ್ಮ ಮನೆ, ಅಂಗಡಿಯಲ್ಲಿರುವ ಈ ರೀತಿಯ ಕುದುರೆ ಪ್ರತಿಮೆ
ನಕಾರಾತ್ಮಕತೆಯು ಯಶಸ್ಸನ್ನು ತಡೆಯುತ್ತದೆ. ಆದ್ದರಿಂದ, ಸಂಜೆ ವೇಳೆ ಸ್ನಾನ ಮಾಡುವಾಗ ಸ್ನಾನದ ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ, ಅದು ನಕಾರಾತ್ಮಕತೆ ಮತ್ತು ಒತ್ತಡವನ್ನು ತೆಗೆದುಹಾಕುತ್ತದೆ. ನಿಮಗೆ ಸಂಜೆ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ವಾರಕ್ಕೊಮ್ಮೆ ಬೆಳಿಗ್ಗೆ ಉಪ್ಪುನೀರಿನೊಂದಿಗೆ ಸ್ನಾನ ಮಾಡಿ.
ಜೀವನದಲ್ಲಿ ಒಂದರ ನಂತರ ಒಂದು ಬಿಕ್ಕಟ್ಟುಗಳು ಎದುರಾದರೆ, ಹನುಮಾನ್ ಚಾಲೀಸಾ ಅಥವಾ ದುರ್ಗಾ ಸಪ್ತಶತಿಯನ್ನು ಪಠಿಸಿ. ಇದು ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ ಮತ್ತು ಜೀವನವನ್ನು ಸುಲಭಗೊಳಿಸುತ್ತದೆ.
ಇದನ್ನೂ ಓದಿ- Astrology: ಈ 5 ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಸಿಗುತ್ತೆ ಭಾರೀ ಯಶಸ್ಸು
ಸೂರ್ಯನಿಗೆ ಅರ್ಧ್ಯವನ್ನು ನೀಡುವುದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಪ್ರತಿದಿನ ಬೆಳಿಗ್ಗೆ, ತಾಮ್ರದ ಪಾತ್ರೆಯಲ್ಲಿ ಸಿಂಧೂರ ಮಿಶ್ರಿತ ನೀರನ್ನು ತೆಗೆದುಕೊಂಡು ಸೂರ್ಯನಿಗೆ ಅರ್ಪಿಸಿ, ಇದರಿಂದ ನಿಮ್ಮ ಅದೃಷ್ಟವು ಹೊಳೆಯುತ್ತದೆ ಎಂದು ಹೇಳಲಾಗುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)