ಈ ತಿಂಗಳು ಮಾರುಕಟ್ಟೆಗೆ ಬರುತ್ತಿದೆ ಈ ಜಬರ್ ದಸ್ತ್ ಸ್ಮಾರ್ಟ್‌ಫೋನ್‌ಗಳು
Oppo ತನ್ನ ಹೊಸ ಸ್ಮಾರ್ಟ್‌ಫೋನ್ ಸರಣಿಯನ್ನು ಫೆಬ್ರವರಿ 4 ರಂದು ಬಿಡುಗಡೆ ಮಾಡುತ್ತಿದೆ. Oppo Reno7 ಮತ್ತು Oppo Reno7 Pro, ಈ ಸರಣಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಸೇರಿಸಲಾಗುವುದು.
ಫೆಬ್ರವರಿ 9 ರಂದು ಸ್ಯಾಮ್‌ಸಂಗ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ, ಇದರಲ್ಲಿ ಈ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸರಣಿಯು Samsung Galaxy S22, Samsung Galaxy S22 + ಮತ್ತು Samsung Galaxy S22 Ultra ಎಂಬ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ,.
ಚೈನೀಸ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Realme ತನ್ನ ಹೊಸ 5G ಸ್ಮಾರ್ಟ್‌ಫೋನ್ ಸರಣಿ, Realme 9 Pro ಸರಣಿಯನ್ನು ಸಹ ಬಿಡುಗಡೆ ಮಾಡಲಿದೆ. ಈ ಸರಣಿಯು ಎರಡು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.
ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಸ್ಟ್ರಾಂಗ್ ಡಿಸ್‌ಪ್ಲೇ ಮತ್ತು ಇನ್ನೂ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರೆಡ್‌ಮಿ ತನ್ನ ಹೊಸ ಸ್ಮಾರ್ಟ್‌ಫೋನ್ ಸರಣಿಯಾದ ರೆಡ್‌ಮಿ ನೋಟ್ 11 ಸರಣಿಯನ್ನು ಫೆಬ್ರವರಿ 9 ರಂದು ಬಿಡುಗಡೆ ಮಾಡಲಿದೆ. ಇದರಲ್ಲಿ ರೆಡ್‌ಮಿ ನೋಟ್ 11 ಮತ್ತು ರೆಡ್‌ಮಿ ನೋಟ್ 11 ಎಸ್ ಎರಡು ಫೋನ್‌ಗಳು ಸೇರಿವೆ.