ವಿರಾಟ್ ಕೊಹ್ಲಿಗೆ ಈ ಹಾಡುಗಳೆಂದರೆ ಪಂಚಪ್ರಾಣ… ಕೇಳಿದ ತಕ್ಷಣ ನಿಂತಲ್ಲೇ ಡ್ಯಾನ್ಸ್ ಮಾಡ್ತಾರಂತೆ!!
ವಿರಾಟ್ ಕೊಹ್ಲಿಯನ್ನು ಅದೆಷ್ಟೋ ಅಭಿಮಾನಿಗಳು ದೇವರಂತೆ ಪ್ರೀತಿಸುತ್ತಾರೆ. ಅವರಂತೆ ಜೀವನಶೈಲಿ ನಡೆದಲು ಸಾಧ್ಯವಾಗದಿದ್ದರೂ, ಅವರ ಫೇವರೇಟ್ ವಿಷಯಗಳನ್ನು ಫಾಲೋ ಮಾಡಲು ಪ್ರಯತ್ನಿಸುತ್ತಾರೆ. ಅದರಲ್ಲಿ ಹಾಡುಗಳೂ ಸೇರಿವೆ. ವಿರಾಟ್ ಕೊಹ್ಲಿಗೆ 3 ಹಾಡುಗಳು ಫೇವರೇಟ್ ಅಂತೆ. ಅವುಗಳ ಬಗ್ಗೆ ನಾವಿಂದು ಮಾಹಿತಿಯನ್ನು ನೀಡಲಿದ್ದೇವೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ವಿರಾಟ್ ತಮ್ಮ ಮೂರು ಫೇವರೇಟ್ ಹಾಡುಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ 2 ಹಾಡು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನಟನೆಯ ಸಿನಿಮಾದ್ದು.
ವಿರಾಟ್ ನಟಿ ಅನುಷ್ಕಾ ಅವರ ಪತಿ ಮಾತ್ರವಲ್ಲ, ಬಿಗ್ ಫ್ಯಾನ್ ಕೂಡ ಹೌದು. ಇವರ ಸಿನಿಮಾದ ಹಾಡುಗಳೆಂದರೆ ವಿರಾಟ್’ಗೆ ಸಖತ್ ಇಷ್ಟವಂತೆ. ಹೀಗೆಂದು ಇತ್ತೀಚಿನ ಸಂದರ್ಶನವೊಂದರಲ್ಲಿ ವಿರಾಟ್ ಹೇಳಿದ್ದಾರೆ.
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುಮುಖಿ ಸುರೇಶ್ ಅವರೊಂದಿಗಿನ ಸಂದರ್ಶನದಲ್ಲಿ, ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ‘ಚನ್ನ ಮೆರೆಯಾ', 'ಏ ದಿಲ್ ಹೈ ಮುಷ್ಕಿಲ್' ಮತ್ತು 'ದೇವ ದೇವಾ' ಹಾಡುಗಳೆಂದರೆ ನನಗೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.
ಈ ಹಾಡುಗಳಲ್ಲಿ ‘ಚನ್ನ ಮೆರೆಯಾ' ಮತ್ತು 'ಏ ದಿಲ್ ಹೈ ಮುಷ್ಕಿಲ್' ಅನುಷ್ಕಾ ಶರ್ಮಾ ಅವರ ಸಿನಿಮಾ ಆಗಿದ್ದು, ಮೂರನೆಯ ಹಾಡು 'ದೇವ ದೇವಾ' ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಬ್ರಹ್ಮಾಸ್ತ್ರ ಸಿನಿಮಾದ್ದಾಗಿದೆ.