ವಿಕ್ಕಿ ಕತ್ರಿನಾ ರಾಯಲ್ ಆರತಕ್ಷತೆಗೆ ಗೈರಾಗಲಿದ್ದಾರೆ ಈ ನಟ ನಟಿಯರು, ಕಾರಣ ಏನು ಗೊತ್ತಾ ?

Mon, 13 Dec 2021-10:33 am,

ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅವರ ಹಳೆಯ ಸಂಬಂಧವನ್ನು ನೋಡಿದರೆ, ರಣಬೀರ್ ಕಪೂರ್ ಆರತಕ್ಷತೆಗೆ ಆಹ್ವಾನ  ಪಡೆಯುವುದು ಅನುಮಾನ. ರಣಬೀರ್ ಕಪೂರ್ ಈಗ ಆಲಿಯಾ ಭಟ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ರಣಬೀರ್ ಮತ್ತು ಕತ್ರಿನಾ ಕೈಫ್ ಉತ್ತಮ ಸ್ನೇಹಿತರಾಗಿದ್ದರು.

ಸಲ್ಮಾನ್ ಖಾನ್ ಕೂಡ ಕತ್ರಿನಾ ಕೈಫ್ ಅವರ ಮಾಜಿ ಗೆಳೆಯ. ಕತ್ರೀನಾ,  ಸಲ್ಮಾನ್ ಮತ್ತು ಅವರ ಕುಟುಂಬದೊಂದಿಗೆ ಇನ್ನೂ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದರೂ, ಅವರನ್ನು ಮದುವೆಗೆ ಆಹ್ವಾನಿಸಿರಲಿಲ್ಲ. ಈ ಕಾರಣದಿಂದಾಗಿ, ಬಹುಶಃ ಸಲ್ಮಾನ್ ಕೂಡ ಆರತಕ್ಷತೆಗೆ ಬರದೇ ಇರಬಹುದು. 

ಕತ್ರಿನಾ ಕೈಫ್ ಅವರ ಉತ್ತಮ ಸ್ನೇಹಿತ ಶಾರುಖ್ ಖಾನ್. ಆದರೆ ಅವರ ಟೈಟ್ ಶೆಡ್ಯೂಲ್  ಕಾರಣದಿಂದಾಗಿ, ಶಾರುಖ್ ಕೂಡಾ ಆರತಕ್ಷತೆಗೆ ಹಾಜರಾಗದೇ ಇರಬಹುದು. ಶಾರುಖ್ ಇತ್ತೀಚಿನ ದಿನಗಳಲ್ಲಿ 'ಪಠಾಣ್' ಮತ್ತು ಇತರ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಕತ್ರಿನಾ ಕೈಫ್ ಜೊತೆ 'ಜೀ ಲೇ ಜರಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿ ಇಲ್ಲದ ಕಾರಣ ಅವರ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ನಟಿ ಹರ್ಲೀನ್ ಸೇಥಿ ವಿಕ್ಕಿ ಕೌಶಲ್ ಅವರ ಮಾಜಿ ಗೆಳತಿ. ಅವರಿಬ್ಬರ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಹಾಗಾಗಿ, ನಟಿ ವಿಕ್ಕಿ ಕತ್ರಿನಾ ಆರತಕ್ಷತೆ ಸಮಾರಂಭದಲ್ಲಿ ಅವರು ಭಾಗವಹಿಸುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link