ಕಲರ್, ಡೈ ಬಳಸದೆ ಕೂದಲನ್ನು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ವಸ್ತುಗಳು
ಎಳ್ಳು, ಅದರಲ್ಲೂ ಕಪ್ಪು ಎಳ್ಳು, ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. ಕಪ್ಪು ಎಳ್ಳಿನ ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಕಪ್ಪು ಎಳ್ಳು ಬೀಜಗಳನ್ನು ವಾರಕ್ಕೆ ಎರಡು ಬಾರಿ ತಿನ್ನುವುದು ಕೂಡಾ ಕೂದಲು ಬಿಳಿಯಾಗುವ ಪ್ರಕ್ರಿಯೆ ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ಒಂದು ಗಿಡಮೂಲಿಕೆಯಾಗಿದ್ದು, ಇದು ಬಿಳಿ ಕೂದಲನ್ನು ಕಪಾಗಿಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿಯನ್ನು ಕುದಿಸಿದ ನೀರನ್ನು ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.
ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿದ್ದು ಅದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಭೃಂಗರಾಜ್ ಎಣ್ಣೆಯು ಆರಂಭಿಕ ಬಿಳಿ ಕೂದಲು ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಲ್ಲದೆ ಕೂದಲಿಗೆ ಹೊಳಪು, ಮೃದುತ್ವ ಮತ್ತು ಶಕ್ತಿಯನ್ನು ನೀಡುತ್ತದೆ. ಇದು ಬಿಳಿ ಕೂದಲು ಬೆಳೆಯದಂತೆ ತಡೆಯುತ್ತದೆ.
ದಾಸವಾಳದ ಎಲೆ ಮತ್ತು ಹೂವು ಎರಡೂ ಕೂದಲಿನ ಆರೋಗ್ಯಕ್ಕೆ ಬಹಳ ಸಹಕಾರಿ. ಇದು ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಆಯುರ್ವೇದದ ಪ್ರಕಾರ, ದಾಸವಾಳವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.