Net Banking Tips : ನೆಟ್ ಬ್ಯಾಂಕಿಂಗ್ ಬಳಕೆದಾರರೆ ಎಚ್ಚರ! ನೆನಪಿರಲಿ ಈ ಸುರಕ್ಷಿತಾ ಕ್ರಮಗಳು!
ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಸುರಕ್ಷಿತವಾಗಿಲು, ನಿಮಗೆ ಗೊತ್ತಿಲ್ಲದ ಲಿಂಕ್‌ಗಳನ್ನು ಯಾವತ್ತೂ ಕ್ಲಿಕ್ ಮಾಡಿಬೇಡಿ ಮತ್ತು ಅವುಗಳನ್ನು ಡೌನ್‌ಲೋಡ್ ಸಹ ಮಾಡಬೇಡಿ.
ನೀವು ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ನಿಮ್ಮ ಮೊಬೈಲ್, ಲ್ಯಾಪ್ ಟಾಪ್ ಅಲ್ಲಿ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡುವುದು ಮರೆಯಬೇಡಿ. ಏಕೆಂದರೆ ಇದು ಮಾಲ್‌ವೇರ್‌ನ ಬೆದರಿಕೆಯಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಾಗ ಸಂಪೂರ್ಣ ಪ್ರಕ್ರಿಯೆಯನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.
ನೀವು ಸಾರ್ವಜನಿಕ ವೈಫೈ ನೆಟ್‌ವರ್ಕ್ ಅನ್ನು ಬಳಸಿಕೊಂಡು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ನೀವು ಜಾಗರೂಕರಾಗಿರಬೇಕು ಏಕೆಂದರೆ ಲೋನ್ ಶಾರ್ಕ್‌ಗಳು ಇವುಗಳ ಮೂಲಕ ನಿಮ್ಮನ್ನು ಗುರಿಯಾಗಿಸಿಕೊಂಡು ನಿಮ್ಮ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕ ವೈಫೈ ಅನ್ನು ಯಾವತ್ತೂ ಬಳಸಬೇಡಿ.
ನೀವು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ನಿಮ್ಮ ಪಾಸ್‌ವರ್ಡ್ ಮತ್ತು ಐಡಿಯನ್ನು ಯಾರಿಗೂ ಹೇಳಬೇಡಿ. ಮತ್ತು ಆಗಾಗ ಪಾಸ್‌ವರ್ಡ್ ಚೇಂಜ್ ಮಾಡುತ್ತಿರಬೇಕು. ನಿಮ್ಮ ಖಾತೆಯು ಅಸುರಕ್ಷಿತವಾಗಿದ್ದರೆ, ಅದನ್ನು ಯಾವುದೇ ಸಮಯದಲ್ಲಿ ಹ್ಯಾಕ್ ಮಾಡಬಹುದು.
ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸಲು ನೀವು ಸ್ಟ್ರಾಂಗ್ ಪಾಸ್‌ವರ್ಡ್ ಅನ್ನು ಆರಿಸಿಕೊಳ್ಳಬೇಕು ಏಕೆಂದರೆ ಸ್ಟ್ರಾಂಗ್ ಪಾಸ್‌ವರ್ಡ್ ಮಾತ್ರ ನಿಮ್ಮ ಬ್ಯಾಂಕಿಂಗ್ ಪ್ರಕ್ರಿಯೆಯನ್ನು ಸುರಕ್ಷಿತಗೊಳಿಸುತ್ತದೆ.