ನಿಮ್ಮ ಫ್ರಿಡ್ಜ್‌ನಲ್ಲಿರುವ ಈ ಎರಡು ವಸ್ತುಗಳಿಂದ ಬ್ಲ್ಯಾಕ್‌ಹೆಡ್‌ಗಳಿಗೆ ಸಿಗುತ್ತೆ ಸುಲಭ ಪರಿಹಾರ
ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ತ್ವಚೆಯ ಮೇಲೂ ನಕಾರಾತ್ಮಕ ಪರಿಣಾಮಗಳು ಕಂಡು ಬರುತ್ತವೆ. ದುಬಾರಿ ಸೌಂದರ್ಯ ಉತ್ಪನ್ನಗಳು ಅಥವಾ ಚಿಕಿತ್ಸೆಗಳ ಹೊರತಾಗಿಯೂ ಕೆಲವು ಸಮಸ್ಯೆಗಳಿಗೆ ಅಷ್ಟು ಸುಲಭವಾಗಿ ಪರಿಹಾರ ದೊರೆಯುವುದೇ ಇಲ್ಲ. ಅಂತನ ಸಮಸ್ಯೆಗಳಲ್ಲಿ ಮುಖದ ಮೇಲೆ ಕಾಣಿಸಿಕೊಳ್ಳುವ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಕೂಡ ಒಂದು.
ಇಂದಿನ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಮುಖದ ಮೇಲೆ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಉದ್ಭವಿಸುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ನಿಮ್ಮ ಮನೆಯಲ್ಲಿರುವ ಎರಡೇ ಎರಡು ಪದಾರ್ಥಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಬ್ಲ್ಯಾಕ್ ಹೆಡ್ಸ್ ತೆಗೆಯಲು ಸೌತೆಕಾಯಿ, ಮತ್ತು ಚಹಾ ಪುಡಿ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ.
ಬ್ಲ್ಯಾಕ್‌ಹೆಡ್‌ಗಳನ್ನು ತೆಗೆಯುವ ಮಾಸ್ಕ್ ತಯಾರಿಸಲು, ಮೊದಲು ಪ್ಯಾನ್ ತೆಗೆದುಕೊಳ್ಳಿ. ನಂತರ ಅದಕ್ಕೆ ನಾಲ್ಕನೇ ಒಂದು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. ಇದರ ನಂತರ, ಅದರಲ್ಲಿ ಒಂದು ಚಮಚ ಜಿಲಾಟಿನ್ ಪುಡಿ ಮತ್ತು ಎರಡು ಚಮಚ ಸೌತೆಕಾಯಿ ರಸವನ್ನು ಸೇರಿಸಿ. ಇದರೊಂದಿಗೆ ಎರಡು ಚಮಚ ಗ್ರೀನ್ ಟೀ ಪುಡಿಯನ್ನು ಹಾಕಿ. ನಂತರ ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಯವಾದ ಪೇಸ್ಟ್ ತಯಾರಿಸಿ.
ಈ ಬ್ಲ್ಯಾಕ್ ಹೆಡ್ಸ್ ಮಾಸ್ಕ್ ಅನ್ನು ಬಳಸುವ ಮೊದಲು ಚೆನ್ನಾಗಿ ಮುಖ ತೊಳೆಯಿರಿ.
ಮುಖವನ್ನು ಸ್ವಚ್ಛಗೊಳಿಸಿದ ಬಳಿಕ ಬ್ರಷ್‌ನ ಸಹಾಯದಿಂದ ಬ್ಲ್ಯಾಕ್ ಹೆಡ್ಸ್ ತೆಗೆಯುವ ಮಾಸ್ಕ್ ಅನ್ನು ಸಂಪೂರ್ಣವಾಗಿ ಅಪ್ಪ್ಲೈ ಮಾಡಿ. ಬಳಿಕ 15-20 ನಿಮಿಷಗಳವರೆಗೆ ಇದನ್ನು ಒಣಗಳು ಬಿಟ್ಟು ನಂತರ ತಣ್ಣೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ, ಬ್ಲ್ಯಾಕ್ ಹೆಡ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.