ಟೀಂ ಇಂಡಿಯಾಗೆ ಕೊಹ್ಲಿ ಸೆಲೆಕ್ಟ್ ಆಗಲು ಕಾರಣ ಈ ಇಬ್ಬರು ಸ್ಟಾರ್ ಕ್ರಿಕೆಟಿಗರು! ಅಂದು ಕೊಹ್ಲಿ ಹೆಸರು ಸೂಚಿಸಿದ ಆ ಶಕ್ತಿ ಯಾರು ಗೊತ್ತಾ?
ವಿರಾಟ್ ಕೊಹ್ಲಿ ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆಟಗಾರ. ವಿಶ್ವದ ಅಗ್ರ ಆಟಗಾರರ ಪಟ್ಟಿಯಲ್ಲಿ ಇವರೂ ಕೂಡ ಒಬ್ಬರು. ಇತ್ತೀಚೆಗಷ್ಟೇ ಕೊಹ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಆರಂಭದಲ್ಲಿ ಟೀಂ ಇಂಡಿಯಾಗೆ ಎಂಟ್ರಿ ಪಡೆಯಲು ಕಾರಣ ಸುರೇಶ್ ರೈನಾ ಅಂತೆ. ಇವರೇ ತಮ್ಮ ಹೆಸರನ್ನು ಸಮಿತಿ ಮುಂದಿಟ್ಟಿದ್ದು ಎಂದು ಕೊಹ್ಲಿ ಹೇಳಿದ್ದಾರೆ.
ಟೀಂ ಇಂಡಿಯಾಗೆ ಆರಂಭಿಕರಾಗಿ ಕೊಹ್ಲಿ ಹೊಂದಿಕೊಳ್ಳಲಿಲ್ಲ. ಆದರೆ ರೈನಾ ಕಾರಣ ಅವರಿಗೆ ಅವಕಾಶ ಸಿಕ್ಕಿತು. ಜೊತೆಗೆ ಮಾಜಿ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಅವರು ಸಹ ನನ್ನ ಯಶಸ್ಸಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಕೊಹ್ಲಿ, "2008 ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಎಮರ್ಜಿಂಗ್ ಕಪ್ ಆಡುತ್ತಿದ್ದೆವು. ಆ ಸಮಯ ನನಗೆ ಇನ್ನೂ ನೆನಪಿದೆ, ಸುರೇಶ್ ರೈನಾ ನನ್ನ ಬಗ್ಗೆ ಕೇಳಿರಬೇಕು. ಪಂದ್ಯಾವಳಿಯ ಮಧ್ಯದಲ್ಲಿ ಬಂದರು. ಮೊದಲು ಬದರಿನಾಥ್ ನಾಯಕರಾಗಿದ್ದರು ಮತ್ತು ಇದಾದ ನಂತರ ರೈನಾ ನಾಯಕತ್ವವನ್ನು ಪಡೆದರು. ಪ್ರವೀಣ್ ಆಮ್ರೆ ನಮ್ಮ ಕೋಚ್ ಆಗಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಬೆಂಚ್ ಮೇಲೆ ಕೂರಿಸಲಾಯಿತು. ಏಕೆಂದರೆ ಮೊದಲ ಎರಡು-ಮೂರು ಪಂದ್ಯಗಳಲ್ಲಿ ನಾನು ಪ್ರದರ್ಶನ ನೀಡಲಿಲ್ಲ. ಆದರೆ ರೈನಾ ಮತ್ತು ಅಂದು ಮುಖ್ಯ ಆಯ್ಕೆಗಾರರಾಗಿದ್ದ ದಿಲೀಪ್ ವೆಂಗ್ಸಾಕರ್ ಸರ್ ನನಗೆ ಮತ್ತೆ ಅವಕಾಶ ನೀಡಿದರು” ಎಂದಿದ್ದಾರೆ.
ಟೀಂ ಇಂಡಿಯಾ ಎಮರ್ಜಿಂಗ್’ಗಾಗಿ ಕೊಹ್ಲಿ 120 ರನ್’ಗಳ ಪ್ರಬಲ ಇನ್ನಿಂಗ್ಸ್ ಆಡಿದ್ದಲ್ಲದೆ, ಈ ಪಂದ್ಯದಲ್ಲಿ ಅಜೇಯರಾಗಿ ಮರಳಿದರು. ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ನ್ಯೂಜಿಲೆಂಡ್ ಎಮರ್ಜಿಂಗ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದು ಸ್ವತಃ ತಮ್ಮನ್ನು ಸಾಬೀತುಪಡಿಸಿದರು.
ಇಂದು ಐಪಿಎಲ್ ತಂಡ ಆರ್ ಸಿ ಬಿ ಸಿಎಸ್’ಕೆಯನ್ನು ಎದುರಿಸಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಸಿಎಸ್‌ಕೆ ಗೆದ್ದರೆ ಪ್ಲೇಆಫ್ ಹಂತ ತಲುಪಲಿದೆ. ಆದರೆ RCB ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ.