Kitchen Vastu: ಅಡುಗೆಮನೆಯಲ್ಲಿ ಈ 2 ವಸ್ತುಗಳು ಖಾಲಿಯಾಗಲೇಬಾರದು! ಅಂತಹ ಕಡೆ ಒಂದು ನಿಮಿಷವೂ ನಿಲ್ಲಲ್ಲ ಲಕ್ಷ್ಮೀ..!
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆ ಉತ್ತರ ದಿಕ್ಕಿಗೆ ಮನೆ ಮಾಡಿರಬಾರದು. ಅಂತೆಯೇ ಅಡುಗೆ ಮನೆಯಲ್ಲಿ ಎಂದಿಗೂ ಕೂಡ ಸಾಮಾಗ್ರಿಗಳು ಖಾಲಿ ಆಗಲೇಬಾರದು
ವಾಸ್ತವವಾಗಿ, ಅಡುಗೆಮನೆಯಲ್ಲಿರುವ ವಸ್ತುಗಳಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಕೆಲವೊಮ್ಮೆ ಕೆಲವು ಪದಾರ್ಥಗಳು ಖಾಲಿಯಾದರೂ ಸಹ ತೊಂದರೆ ಇಲ್ಲ. ಆದರೆ, ಎಂದಿಗೂ ಸಹ ಅಡುಗೆಮನೆಯಲ್ಲಿ 2 ವಸ್ತುಗಳು ಖಾಲಿಯಾಗಲೇಬಾರದು.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ಈ ಎರಡು ವಸ್ತುಗಳು ಖಾಲಿಯಾಗಿದೆ ಎಂದರೆ ಅಂತಹ ಮನೆಯಲ್ಲಿ ಧನಲಕ್ಷ್ಮಿ ನೆಲಸುವುದಿಲ್ಲ. ಬದಲಿಗೆ ದರಿದ್ರ ಲಕ್ಷ್ಮಿ ಒಕ್ಕರಿಸುತ್ತಾಳೆ ಎಂತಲೇ ನಂಬಲಾಗಿದೆ.
ಮೊದಲನೆಯದಾಗಿ ಅಡುಗೆಮನೆಯಲ್ಲಿ ಎಂದಿಗೂ ಕೂಡ 'ಉಪ್ಪು' ಖಾಲಿಯಾಗದಂತೆ ನಿಗಾವಹಿಸಿ. ಇಲ್ಲದಿದ್ದರೆ ಅಂತಹ ಮನೆಯಲ್ಲಿ ಎಷ್ಟೇ ಸಂಪಾದಿಸಿದರೂ ಹಣ ನಿಲ್ಲುವುದಿಲ್ಲ. ಆರ್ಥಿಕ ಮುಗ್ಗಟ್ಟು ಹೆಚ್ಚಾಗುತ್ತದೆ.
ಎರಡನೆಯದಾಗಿ ಅಡುಗೆಯಲ್ಲಿ ಬಳಸುವ ಅರಿಶಿನ ಕುಟುಂಬದ ಆರೋಗ್ಯವನ್ನು ಬಿಂಬಿಸುತ್ತದೆ. ಮನೆಯಲ್ಲಿ ಎಂದೂ ಸಹ 'ಅರಿಶಿನ' ಖಾಲಿ ಆಗಲೇಬಾರದು. ಇದು ಮನೆಯವರ ಅನಾರೋಗ್ಯಕ್ಕೆ ಕಾರಣವಾಗುವುದರ ಜೊತೆಗೆ ಮನೆಯಲ್ಲಿ ಭಾರೀ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.