ಈ ಎರಡು ರಾಶಿ ಜನರು ವಿವಾಹವಾದರೆ ಶಿವ-ಪಾರ್ವತಿಯೇ ಮದುವೆಯಾದಂತೆ! ದೇವಾನುದೇವತೆಗಳ ಆಶೀರ್ವಾದದಿಂದ ದೈವಿಕಪ್ರೀತಿ ಭೂಲೋಕದಲ್ಲಿ ಸಾಕಾರಗೊಂಡ ಸಮ
ಹಿಂದೂ ಧರ್ಮದಲ್ಲಿ, ಜಾತಕ ಹೊಂದಾಣಿಕೆಯನ್ನು ಮದುವೆಗೆ ಮೊದಲು ಮಾಡಲಾಗುತ್ತದೆ. ಜಾತಕ ಹೊಂದಾಣಿಕೆಯಲ್ಲಿ ರಾಶಿಯನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜ್ಯೋತಿಷ್ಯದಲ್ಲಿ 12 ರಾಶಿಗಳಿವೆ. ಈ ರಾಶಿಗಳ ಆಧಾರದ ಮೇಲೆ, ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವದ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಗಳು ವಿವಾಹದಲ್ಲಿ ಒಂದಾದರೆ, ಅವರು ಪರಿಪೂರ್ಣರೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ, ಸಾಕ್ಷಾತ್ ಶಿವ-ಪಾರ್ವತಿ ಸಮಾಗಮವಾದ ಸಂಕೇತ ಎನ್ನಲಾಗುತ್ತದೆ. ಅಂತಹ ಜನರಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ. ಹೀಗಿರುವಾಗ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.
ಜ್ಯೋತಿಷ್ಯದ ಪ್ರಕಾರ, ಮೇಷ ಮತ್ತು ಕುಂಭ ರಾಶಿಯ ಜನರು ಮದುವೆಯಲ್ಲಿ ಒಂದಾದರೆ ಅವರನ್ನು ಪರಿಪೂರ್ಣ ದಂಪತಿಗಳೆಂದು ಪರಿಗಣಿಸಲಾಗುತ್ತದೆ. ಈ ರಾಶಿಗಳ ಜನರು ಸಂತೋಷದ ವೈವಾಹಿಕ ಜೀವನವನ್ನು ಹೊಂದಿರುತ್ತಾರೆ. ಇನ್ನು ಇವರು ಪರಸ್ಪರ ಪ್ರೀತಿಯಿಂದ ಬದುಕುತ್ತಾರೆ.
ಜ್ಯೋತಿಷ್ಯದ ಪ್ರಕಾರ, ಮೇಷ ಮತ್ತು ವೃಶ್ಚಿಕ ರಾಶಿಯ ಜನರು ವಿವಾಹವಾದರೆ ಶಿವ ಪಾರ್ವತಿ ಮದುವೆಯಾದಂತೆ. ಇದಕ್ಕೆ ಕಾರಣ ಶಿವನ ಉಗ್ರ ಶಕ್ತಿ (ಮೇಷ) ಮತ್ತು ಪಾರ್ವತಿಯ ಶಾಂತ ಗುಣ (ವೃಶ್ಚಿಕ). ಈ ಎರಡು ಅಂಶಗಳು ಒಂದಾದರೆ ಒಳ್ಳೆಯದು ಎಂದು ಜೋತಿಷ್ಯ ಹೇಳುತ್ತದೆ. ಇನ್ನು ಎಷ್ಟೇ ಉಗ್ರ ಸ್ವಭಾವವಿದ್ದರೂ ಅದನ್ನು ಶಾಂತಗುಣದ ಮೂಲಕ ತಣ್ಣಗಾಗಿಸಬಹುದು ಎಂಬುದು ಇದರ ಅರ್ಥ.
ಜ್ಯೋತಿಷ್ಯದ ಪ್ರಕಾರ, ಸಿಂಹ ಮತ್ತು ಧನು ರಾಶಿಯ ಜನರು ಕೂಡ ಪರಿಪೂರ್ಣ ದಂಪತಿಗಳೆಂದು ಸಾಬೀತು ಪಡಿಸುತ್ತಾರೆ. ಇವರ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಸಿಂಹ ಮತ್ತು ಧನು ರಾಶಿಯ ಜನರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಈ ಇಬ್ಬರೂ ಶ್ರಮಜೀವಿಗಳು ಮತ್ತು ಪ್ರಾಮಾಣಿಕ ಸ್ವಭಾವದವರು.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವೃಷಭ ರಾಶಿ ಮತ್ತು ಕನ್ಯಾ ರಾಶಿಯ ಜನರು ಅತ್ಯಂತ ಪ್ರೀತಿಯ ದಂಪತಿಗಳಾಗಿರುತ್ತಾರೆ. ಪ್ರೀತಿಯ ವಿಚಾರದಲ್ಲಿ ಇವರಷ್ಟು ಅದೃಷ್ಟವಂತರು ಯಾರೂ ಇರಲ್ಲ. ಈ ರಾಶಿಯ ಜನರು ತಮ್ಮ ಸಂಗಾತಿಯನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಇಬ್ಬರೂ ತುಂಬಾ ಪ್ರಾಮಾಣಿಕರಾಗಿರುತ್ತಾರೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ವಿವರವಾದ ಮತ್ತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಬಂಧಿತ ಕ್ಷೇತ್ರದಲ್ಲಿ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.