Weird Tradition: ಈ ಮಹಿಳೆಯರು ಬಟ್ಟೆ ಒಗೆಯಲ್ಲ, ನೀರು ಮುಟ್ಟಲ್ಲ, ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ! ಕಾರಣವೇನು?
ಜಗತ್ತಿನಲ್ಲಿ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಜೀವನದಲ್ಲಿ ಸ್ನಾನವೇ ಮಾಡದೆ ಬದುಕಲು ಸಾಧ್ಯವೇ? ಎಂಬ ಪ್ರಶ್ನೆ ನಮಗೆಲ್ಲರಿಗೂ ಮೂಡುತ್ತದೆ. ಹೀಗಿರುವಾಗ ಇದಕ್ಕೆ ಉತ್ತರ ಹೌದು. ಈ ವಿಚಾರ ಕೇಳಿದಾಗ ಶಾಕ್ ಆಗಬಹುದು. ಆದರೆ ಇದು ಸತ್ಯ.
ಒಂದು ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಸಂಪ್ರದಾಯವಿದೆ. ಉತ್ತರ ನಮೀಬಿಯಾದಲ್ಲಿ ಹಿಂಬಾ ಬುಡಕಟ್ಟು ಇದ್ದು, ಸುಮಾರು 50,000 ಜನಸಂಖ್ಯೆಯನ್ನು ಹೊಂದಿದ ಜನಾಂಗವಾಗಿದೆ. ಈ ಕುನೆನೆ ಪ್ರದೇಶವು (ಈಗಿನ ಕಾಕೋಲ್ಯಾಂಡ್) ಅಂಗೋಲಾದ ಕುನೆನೆ ನದಿಯ ಇನ್ನೊಂದು ಬದಿಯಲ್ಲಿದೆ.
ಹಿಂಬಾ ಬುಡಕಟ್ಟಿನ ಮಹಿಳೆಯರು ಸ್ನಾನದ ಬದಲಿಗೆ ವಿಶೇಷ ಗಿಡಮೂಲಿಕೆಗಳನ್ನು ಬಳಸುತ್ತಾರೆ. ಅದರ ಹೊಗೆಯಿಂದ ತಮ್ಮ ದೇಹವನ್ನು ತಾಜಾವಾಗಿರಿಸಿಕೊಳ್ಳುತ್ತಾರೆ. ಈ ಗಿಡಮೂಲಿಕೆಯು ಅವರ ದೇಹಕ್ಕೆ ಉತ್ತಮ ವಾಸನೆಯನ್ನು ನೀಡುತ್ತದೆ. ಇದು ರೋಗಾಣುಗಳನ್ನು ನಾಶಪಡಿಸುತ್ತದೆ.
ಈ ಮಹಿಳೆಯರು ಮದುವೆಯ ಸಮಯದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುತ್ತಾರೆ. ವಾಸ್ತವವಾಗಿ, ಈ ಮಹಿಳೆಯರಿಗೆ ನೀರನ್ನು ಮುಟ್ಟುವುದನ್ನು ಸಹ ನಿಷೇಧಿಸಲಾಗಿದೆ. ಆದ್ದರಿಂದ ಅವರು ತಮ್ಮ ಬಟ್ಟೆಗಳನ್ನು ಸಹ ತೊಳೆಯುವುದಿಲ್ಲ. ಈ ಸಂಪ್ರದಾಯವನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ.
ಇದಲ್ಲದೇ ಇಲ್ಲಿನ ಮಹಿಳೆಯರು ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ಪ್ರಾಣಿಗಳ ಕೊಬ್ಬು ಮತ್ತು ಹೆಮಟೈಟ್ ದ್ರಾವಣದಿಂದ ತಯಾರಿಸಿದ ವಿಶೇಷ ಲೋಷನ್ ಬಳಸುತ್ತಾರೆ. ಹೆಮಟೈಟ್ ಕಾರಣ, ಅವರ ಚರ್ಮದ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ವಿಶೇಷ ಲೋಷನ್ ಗಳು ಕೀಟಗಳ ಕಡಿತದಿಂದ ರಕ್ಷಿಸುತ್ತವೆ.