ಅತ್ಯಧಿಕ ಕೊಲೆಸ್ಟ್ರಾಲ್ ನಿಯಂತ್ರಿಸುತ್ತವೆ ಈ ಯೋಗಾಸನಗಳು..ಟ್ರೈ ಮಾಡಿ ನೋಡಿ
ಚಕ್ರಾಸನ: ಈ ಆಸನ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದಲ್ಲದೇ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ಈ ಆಸನ ಮುಕ್ತಿ ನೀಡುತ್ತದೆ.
ಕಪಾಲಭಾತಿ ಪ್ರಾಣಾಯಾಮ:ಇದನ್ನು ಮಾಡುವುದರಿಂದ ದೇಹದ ರಕ್ತ ಶುದ್ಧವಾಗುವುದಲ್ಲದೇ, ರಕ್ತ ಚಲನವಲನ ಸುಧಾರಿಸುವುದು. ಈ ಆಸನವನ್ನು ಪ್ರತಿದಿನ 10-15 ನಿಮಿಷ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಶಲಾಭಾಸನ: ಈ ಆಸನವೂ ಜೀರ್ಣಕ್ರಯೆಗೆ ಉಪಯುಕ್ತವಾಗಿದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ಬೊಜ್ಜು ಕರಗುವುದು, ಬೆನ್ನು ಮೂಳೆಬಾಗುವುದಿಲ್ಲ, ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೊರಗೆ ಹೋಗುತ್ತದೆ.
ಸರ್ವಾಂಗಾಸನ: ಈ ಆಸನ ವೀರ್ಯದೋಷ, ರಕ್ತದೋಷವನ್ನು ನಿವಾರಿಸುವುದಲ್ಲದೇ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಡಿಮೆಮಾಡುತ್ತದೆ. ಇದರ ನಿಯಮಿತ ಅಭ್ಯಾಸ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಪಶ್ಚಿಮೋತ್ತಾಸನ: ಈ ಆಸನ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುವುದು. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಿ ಹೊಟ್ಟೆ ಬೊಜ್ಜು ಕರಗುತ್ತದೆ.
ಆರ್ಧಮತ್ಸ್ಯಾಸನ: ಮಧುಮೇಹ, ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವಲ್ಲಿ ಆರ್ಧಮತ್ಸ್ಯಾಸನ ಸಹಕಾರಿಯಾಗಿದೆ. ಈಖ ಆಸನ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.