30 ವರ್ಷಗಳ ನಂತರ ಕೇಂದ್ರ ತ್ರಿಕೋನ ರಾಜಯೋಗ, 5 ರಾಶಿಯವರಿಗೆ ಒಲಿದು ಬರಲಿದೆ ರಾಜವೈಭೋಗ

Thu, 19 Sep 2024-7:12 am,

ನಿನ್ನೆಯಷ್ಟೇ (ಸೆ. 18) ಶುಕ್ರನು ತನ್ನದೇ ರಾಶಿಚಕ್ರ ಚಿಹ್ನೆ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿ ಕೂಡ ತನ್ನ ಮೂಲ ತ್ರಿಕೋನ ರಾಶಿ ಕುಂಭದಲ್ಲಿ ಉಪಸ್ಥಿತನಿದ್ದಾನೆ. 

ಶನಿ ಶುಕ್ರನಿಂದ 30 ವರ್ಷಗಳ ಬಳಿಕ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣವಾಗಿದ್ದು, ಕೆಲವು ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯ ಎಂದು ಹೇಳಲಾಗುತ್ತಿದೆ. 

ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಸಮಸ್ಯೆಗಳಿಂದ  ಮುಕ್ತಿ ನೀಡಿ ಪ್ರಮೋಷನ್ ನೀಡುವ ಸಾಧ್ಯತೆ. ಹಿಂದಿನ ಹೂಡಿಕೆಗಳಿಂದ ಬಂಪರ್ ಲಾಭ ಗಳಿಸಬಹುದು.  ಆದಾಯದ ಮೂಲಗಳು ಹೆಚ್ಚಾಗಲಿವೆ. 

ನಿಮ್ಮ ಬಿಸಿನೆಸ್ ವಿಸ್ತರಿಸಲು ಯೋಚಿಸುತ್ತಿರುವವರಿಗೆ ಇದು ಸಕಾಲ. ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ. ಮಾರ್ಚ್2025 ರವರೆಗೂ ನೀವು ಕೈ ಇಟ್ಟಲ್ಲೆಲ್ಲಾ ಬಂಗಾರವೇ ಎಂಬಂತ ಸ್ಥಿತಿ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಶುಭ ವಾರ್ತೆ ಸಿಗಲಿದೆ. 

ಕೇಂದ್ರ ತ್ರಿಕೋನ ರಾಜಯೋಗವು ಸಿಂಹ ರಾಶಿಯ ಜನರ ಬದುಕಿನಲ್ಲಿ ಸ್ಥಗಿತಗೊಂಡಿದ್ದ ವೈವಾಹಿಕ ಮಾತುಕತೆಗಳಲ್ಲಿ ಧನಾತ್ಮಕ ಫಲಿತಾಂಶವನ್ನು ತರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮೆಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.  

ಸ್ವ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಈ ರಾಶಿಯವರಿಗೆ ಶುಕ್ರ ಮಹಾದಶಾ, ಕೇಂದ್ರ ತ್ರಿಕೋನ ರಾಜಯೋಗವು ವೃತ್ತಿ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಸುವರ್ಣ ಸಮಯ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ವ್ಯಾಪಾರಸ್ಥರಿಗೆ ಭರ್ಜರಿ ಲಾಭ.  

ಶನಿ ಮಹಾದಶಾ, ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರಿಗೆ ಎಲ್ಲಾ ಆಯಾಮಗಳಲ್ಲೂ ಭಾರೀ ಅದೃಷ್ಟವನ್ನು ಕರುಣಿಸಲಿದೆ. ಆತ್ಮವಿಶ್ವಾಸ ಹೆಚ್ಚಾಗಿ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳನ್ನು ಅನುಭವಿಸುವಿರಿ. ಒಟ್ಟಾರೆಯಾಗಿ ಜೀವನದಲ್ಲಿ ರಾಜವೈಭೋಗ ಸಿಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link