ಈ ರಾಶಿಯವರಿಗೆ ಗುರು ಬಲ ! ಪ್ರತಿ ಕೆಲಸದಲ್ಲಿಯೂ ಯಶಸ್ಸು, ಉಕ್ಕಿ ಬರುವುದು ಧನ ಸಂಪತ್ತು ! ಸೋಲು ನಿಮ್ಮನ್ನು ಸೋಕುವುದೂ ಇಲ್ಲ
ಎಲ್ಲಾ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಾ ಇರುತ್ತದೆ. ಆದರೆ ಜ್ಯೋತಿಷ್ಯದಲ್ಲಿ ಕೆಲವು ಗ್ರಹಗಳ ಸ್ಥಾನ ಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಹೌದು, ಶನಿ ಸಂಕ್ರಮಣ ಮತ್ತು ಗುರು ಸಂಚಾರಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ.
ಗುರು ಮೇ 1 ರಂದು ತಮ್ಮ ರಾಶಿಯನ್ನು ಬದಲಾಯಿಸಿ ವೃಷಭ ರಾಶಿ ಪ್ರವೇಶಿಸುತ್ತಾರೆ. ಇದು ವರ್ಷದ ಅತಿದೊಡ್ಡ ಜ್ಯೋತಿಷ್ಯ ಘಟನೆ. ಗುರುವಿನ ರಾಶಿ ಬದಲಾವಣೆಯೊಂದಿಗೆ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ. ಇವರು ಹೋದಲೆಲ್ಲಾ ಯಶಸ್ಸು ಕಾಣುವ ಸಮಯ ಇದು.
ವೃಷಭ ರಾಶಿ : ವೃಷಭ ರಾಶಿಯವರಿಗೆ ಅಗಾಧ ಪ್ರಗತಿ ಮತ್ತು ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವುದು ಅಥವಾ ಹೊಸ ಅವಕಾಶಗಳು ನಿಮ್ಮ ಮುಂದೆ ಬರುವುದು. ಹೊಸ ವ್ಯವಹಾರಕ್ಕೆ ಕೈ ಹಾಕಲು ಕೂಡಾ ಇದು ಉತ್ತಮ ಸಮಯ.ಅನಿರೀಕ್ಷಿತ ಮೂಲಗಳಿಂದ ಹಣ ಬರಲಿದೆ.
ಮಿಥುನ ರಾಶಿ : ಮಿಥುನ ರಾಶಿಯವರ ಬಾಳಿನಲ್ಲಿ ಎಲ್ಲವೂ ಶುಭವಾಗಲಿದೆ.ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಆನಂದಿಸಬಹುದು. ಹಣಕಾಸಿನ ಲಾಭವಾಗುವುದು. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ.
ಸಿಂಹ ರಾಶಿ : ಗುರುವಿನ ಸಂಚಾರವೇ ಸಿಂಹ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಏನೇ ಕೆಲಸ ,ಮಾಡಿದರೂ ಅದರಲ್ಲಿ ಗೆಲುವು ಖಂಡಿತಾ. ಕಚೇರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸನ್ನು ನೀಡುತ್ತದೆ. ದೈಹಿಕ ಆರೋಗ್ಯ ಸುಧಾರಿಸಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಕನ್ಯಾ ರಾಶಿಯವರಿಗೆ ಈಗ ಒಳ್ಳೆಯ ಕೆಲಸ ಸಿಗಲಿದೆ.
ಧನು ರಾಶಿ: ಧನು ರಾಶಿಯವರು ಗುರು ಸಂಚಾರದಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರ ಮತ್ತು ಉದ್ಯಮದಲ್ಲಿ ಪ್ರಗತಿ ಸಾಧಿಸಲು ಹೆಚ್ಚಿನ ಅವಕಾಶಗಳಿವೆ. ಹಣದ ಹರಿವು ಹೆಚ್ಚಾಗುತ್ತದೆ.ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.