ಈ ರಾಶಿಯಲ್ಲಿ ಗಜ ಕೇಸರಿ ಯೋಗ ! ಯಶಸ್ಸಿನ ಉತ್ತುಂಗಕ್ಕೆ ಏರುವ ಕಾಲ! ಸೋಲಿಲ್ಲದ ಸರದಾರರಂತೆ ಮೆರೆಯುವರು ಈ ರಾಶಿಯವರು

Wed, 13 Mar 2024-9:43 am,

ಯಾರ ಜಾತಕದಲ್ಲಿ ಗಜ ಕೇಸರಿ ಯೋಗ ಇರುತ್ತದೆಯೋ ಆ ವ್ಯಕ್ತಿಯು ತಮ್ಮ ವೃತ್ತಿಜೀವನದಲ್ಲಿ ಬಹಳಎತ್ತರಕ್ಕೆ ಬೆಳೆಯುತ್ತಾನೆ. ಈ ಯೋಗದಿಂದಾಗಿ  ವ್ಯಕ್ತಿಯ ಎಲ್ಲಾ ಮಹತ್ವಾಕಾಂಕ್ಷೆಗಳು ಈಡೇರುತ್ತವೆ. ಹಣಕಾಸಿನ ಲಾಭ, ಮಕ್ಕಳ ಸುಖ,ಮನೆ ಖರೀದಿಯ  ಭಾಗ್ಯ, ವಾಹನ ಭಾಗ್ಯ ಒದಗಿ ಬರುತ್ತದೆ. 

ಇಂದು ಫಾಲ್ಗುಣ ಚತುರ್ಥಿಯ ದಿನ ಗಜಕೇಸರಿ ಯೋಗ, ಐಂದ್ರ ಯೋಗ, ರವಿ ಯೋಗ,  ನಿರ್ಮಾಣವಾಗುತ್ತಿದೆ. ಇದರಿಂದಾಗಿ ಇಂದಿನ ಮಹತ್ವ ಇನ್ನಷ್ಟು ಹೆಚ್ಚಿದೆ. ಗಜ ಕೇಸರಿ ಯೋಗ ಈ ರಾಶಿಯವರ ಜೀವನದ ಭಾಗ್ಯದ ಬಾಗಿಲು ತೆರೆಯಲಿದೆ. 

ಮಿಥುನ ರಾಶಿ : ಅದೃಷ್ಟ ನಿಮ್ಮ ಜೊತೆ ನಿಂತಿರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಂತೋಷ ಇರುತ್ತದೆ. ನೀವು ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವ ಸಮಯವಿದು.  ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ.   

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರ ಅದೃಷ್ಟದ ದಿನ ಆರಂಭವಾಗಿದೆ. ಒಂದೊಂದೇ ಸಮಸ್ಯೆಗಳಿಂದ ಪರಿಹಾರ ಸಿಗುತ್ತಾ ಹೋಗುತ್ತದೆ. ಆರ್ಥಿಕ ಲಾಭಕ್ಕೆ ಭಾರೀ ಅವಕಾಶಗಳಿವೆ. ಹೊಸ ಕೆಲಸ ಆರಂಭಿಸಲು ಯೋಚಿಸುತ್ತಿದ್ದರೆ ಮುನ್ನಡೆಯಿರಿ, ಯಶಸ್ವಿಯಾಗುತ್ತೀರಿ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಉತ್ತಮ ಅವಕಾಶ ಸಿಗಬಹುದು. 

ಧನು ರಾಶಿ :ಈ ರಾಶಿಯವರಿಗೆ ಇಂದು ಅತ್ಯಂತ ಮಂಗಳಕರ ದಿನವಾಗಲಿದೆ. ಉದ್ಯೋಗಿಗಳ ಕೆಲಸದ ಸ್ಥಳದಲ್ಲಿ ಕೆಲವು ಏರಿಳಿತಗಳು ಕಂಡುಬರಬಹುದು.ಎಲ್ಲಾ ಸಂದರ್ಭಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link