ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ!ಪ್ರತಿ ಕಾರ್ಯದಲ್ಲೂ ಸ್ವಯಂ ಲಕ್ಷ್ಮಿಯೇ ಜೊತೆಯಾಗುತ್ತಾಳೆ
ಮಕರ ರಾಶಿ : ಭೂಮಿ ಅಥವಾ ಹೊಸ ಮನೆ ಖರೀದಿಗೆ ಒಳ್ಳೆಯ ಸಮಯ.ಆಸ್ತಿ ಖರೀದಿ ಯೋಗ ಇರುವುದರಿಂದ ಈ ಬಗ್ಗೆ ಯೋಚಿಸಿದರೆ ಕೆಲಸ ಕೈಗೂಡುವುದು.ವ್ಯವಹಾರದಲ್ಲಿ ಆರ್ಥಿಕ ಲಾಭ ಹೆಚ್ಚಾಗುವುದು.ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.ಹೆಜ್ಜೆ ಹೆಜ್ಜೆಗೂ ಪ್ರಗತಿ ಕಾಣುವಿರಿ.
ಮಿಥುನ ರಾಶಿ : ಈ ರಾಶಿಯವರ ಜೀವನದಲ್ಲಿ ಸಂಪತ್ತು ಹೆಚ್ಚಾಗುವುದು.ವ್ಯಾಪಾರಸ್ಥರು ಅನೇಕ ಅತ್ಯುತ್ತಮ ಗಳಿಕೆಯ ಅವಕಾಶಗಳನ್ನು ಪಡೆಯುತ್ತಾರೆ. ಆದಾಯ ಹೆಚ್ಚಾಗುವುದು. ಕಚೇರಿ ಕೆಲಸದಲ್ಲಿಯೂ ನಿಮ್ಮ ಕೆಲಸಕ್ಕೆ ವಿಶೇಷ ಮನ್ನಣೆ ಸಿಗುವುದು.ಗೌರವ ಹೆಚ್ಚಾಗುತ್ತದೆ.
ತುಲಾ ರಾಶಿ :ತುಲಾ ರಾಶಿಯವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಾರೆ. ಹಣ ಗಳಿಸುವ ಹೊಸ ವಿಧಾನಗಳನ್ನು ಕಂಡುಕೊಳ್ಳುವಿರಿ.ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದೇಶ ಪ್ರಯಾಣ ಯೋಗ ಕೂಡಿ ಬರಲಿದೆ.ಕ್ರೀಡಾ ಸ್ಪರ್ಧೆಗಳಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.
ಧನು ರಾಶಿ:ಸಮೃದ್ಧಿ ಕಾಣುವ ಕಾಲ ಇದು.ಧನು ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಪ್ರಗತಿ ಕಾಣುವುದು.ಈ ಸಮಯದಲ್ಲಿ ಹಣವನ್ನು ಗಳಿಸಲು ಅನೇಕ ಉತ್ತಮ ಅವಕಾಶಗಳಿವೆ. ಹಣಕ್ಕೆ ಸಂಬಂಧಿಸಿದ ಅನೇಕ ಹಳೆಯ ಸಮಸ್ಯೆಗಳಿಂದ ಪರಿಹಾರ ಸಿಗುವುದು.ಸಾಲದಿಂದ ಸಂಪೂರ್ಣ ಮುಕ್ತಿ ಸಿಗುವುದು.
ಕುಂಭ ರಾಶಿ : ಕುಂಭ ರಾಶಿಯವರಿಗೆ ಇದು ಶುಭ ಸಮಯ.ಆರ್ಥಿಕ ಲಾಭವಿರುತ್ತದೆ. ವೃತ್ತಿಯಲ್ಲಿ ಬಡ್ತಿ ಸಿಗುವುದು. ವೇತನ ಹೆಚ್ಚಾಗುವುದು.ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ.ನಿಮಗೆ ಅರಿವೇ ಇರದ ಮೂಲದಿಂದಲೂ ಹಣ ಬರುವುದು.
ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ, ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.