ಈ ರಾಶಿಯವರ ಕೈ ಹಿಡಿಯುವಳು ಅದೃಷ್ಟ ಲಕ್ಷ್ಮೀ ! ತುಂಬಿ ತುಳುಕುವುದು ಬ್ಯಾಂಕ್ ಬ್ಯಾಲೆನ್ಸ್ !

Tue, 08 Aug 2023-4:44 pm,

ಕರ್ಕಾಟಕ ರಾಶಿಯಲ್ಲಿ ಶುಕ್ರನ ಪ್ರವೇಶದಿಂದಾಗಿ ಗಜಲಕ್ಷ್ಮಿ ಯೋಗವು ರೂಪುಗೊಂಡಿದೆ.  ಇದು ಅನೇಕ ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ.  ಈ ಸಮಯದಲ್ಲಿ, ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವು ಈ ರಾಶಿಯವರ ಮೇಲೆ ಇರುತ್ತದೆ.  

ಹಣದ ವಿಷಯದಲ್ಲಿ, ಈ ರಾಶಿಯವರು ಅದೃಷ್ಟವಂತರು.  ಗಜಲಕ್ಷ್ಮಿ ಯೋಗದಿಂದ ಈ ರಾಶಿಯವರ ಆದಾಯದ ಮೂಲವು ಹೆಚ್ಚಾಗುತ್ತದೆ. ಹಣದ ಕೊರತೆ ಎದುರಾಗುವುದೇ ಇಲ್ಲ. ಪ್ರೇಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ದೂರವಾಗುತ್ತವೆ. 

ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತದೆ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

ಗಜಲಕ್ಷ್ಮಿ ರಾಜಯೋಗದ ಸಂಪೂರ್ಣ ಲಾಭ ಈ ರಾಶಿಯವರಿಗೆ ಸಿಗುತ್ತದೆ.  ಕೆಲಸದ ಆಧಾರದ ಮೇಲೆ ಹೊಸ ಉದ್ಯೋಗಾವಕಾಶ ಪಡೆಯುತ್ತೀರಿ. ಬಯಸಿದ ಕೆಲಸ ಸಿಗುತ್ತದೆ.  ಮನಸ್ಸಿನ ಇಚ್ಛೆ ಈಡೇರುತ್ತದೆ. 

ಈ ಸಮಯದಲ್ಲಿ, ಉದ್ಯಮಿಗಳು ಮತ್ತು ಉದ್ಯೋಗಿಗಳು ಇಬ್ಬರೂ ಆರ್ಥಿಕ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣ ಮತ್ತು ಸಂವಹನಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅದ್ಭುತವಾಗಿರುತ್ತದೆ. ನಿವೇನೆ ಹೇಳಿದರೂ ಎದುರಿಗಿರುವವರು ಅದಕ್ಕೆ ತಲೆಬಾಗುತ್ತಾರೆ. 

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. )

ZEENEWS TRENDING STORIES

By continuing to use the site, you agree to the use of cookies. You can find out more by Tapping this link