ಈ ವರ್ಷ ಈ ರಾಶಿಯವರ ಸ್ವಂತ ಮನೆಯ ಕನಸು ನನಸಾಗುವುದು.! ವಾಹನ ಖರೀದಿ ಯೋಗವೂ ಇದೆ !

Fri, 27 Jan 2023-9:08 am,

ವೃಷಭ ರಾಶಿ : ವೃಷಭ ರಾಶಿಯವರ ಎಲ್ಲಾ ಕನಸುಗಳು ಈ ವರ್ಷ ಈಡೇರುತ್ತವೆ. ಹೊಸ ಮನೆ, ಕಾರು ಖರೀದಿಯ ಸಾಧ್ಯತೆಗಳು ಹೆಚ್ಚಿವೆ. ಹಿಂದೆಂದೂ ಕಾಣದ ರೀತಿಯಲ್ಲಿ ಆರ್ಥಿಕ ಸ್ಥಿತಿ ಬದಲಾಗುವುದು. ಈ ರಾಶಿಯವರ ಮೇಲೆ ಶನಿ ದೇವರ ವಿಶೇಷ ಕೃಪೆ ಇರುತ್ತದೆ. ಒಂಟಿಯಾಗಿರುವವರ ಬಾಳಲ್ಲಿ ಸಂಗಾತಿಯ ಪ್ರವೇಶವಾಗುವುದು.

ಕರ್ಕಾಟಕ ರಾಶಿ :  ಮನದ ಎಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಈಡೇರುವುದು. ಕಾರು ಮತ್ತು ಹೊಸ ಮನೆ ಖರೀದಿಸುವ ಕನಸು ನನಸಾಗಬಹುದು. ಜೀವನದಲ್ಲಿ ಸಮೃದ್ದಿ ನೆಮ್ಮದಿ ಮನೆ ಮಾಡಲಿದೆ. 

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಲಾಭವಾಗಬಹುದು. ಈ ಹಿಂದೆ ಕೈತಪ್ಪಿ ಹೋಗಿದ್ದ ಡೀಲ್ ಈಗ ಮತ್ತೆ ನಿಮ್ಮ ಪರವಾಗಿ ಬರಬಹುದು.  ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಐಷಾರಾಮಿ ಕಾರು ಖರೀದಿ ಯೋಗ ಕೂಡಿ ಬರುವುದು.   

ತುಲಾ ರಾಶಿ : 2023 ತುಲಾ ರಾಶಿಯವರ ಪಾಲಿಗೆ ವರದಾನವೇ ಸರಿ.  ಜೀವನದ ಪ್ರತೀ ಹಂತದಲ್ಲಿ ನೆಮ್ಮದಿ ಇರುವುದು. ಮನೆ ಖರೀದಿಯ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ಹೊಸ ಕಾರು ಖರೀದಿಯ ಕನಸು ಕೂಡಾ ನನಸಾಗುವುದು. ವ್ಯಾಪಾರ ಆರಂಭಿಸಿದರೆ ಲಾಭದ ಬಗ್ಗೆ ಚಿಂತೆಯೇ ಬೇಡ.

ವೃಶ್ಚಿಕ ರಾಶಿ : ಬಹಳ ದಿನಗಳಿಂದ ಕಾರು ಖರೀದಿಸುವ ಕನಸು ಕಾಣುತ್ತಿದ್ದವರ ಕನಸು ನನಸಾಗಬಹುದು. ಹಣಕಾಸಿನ ವಿಚಾರದಲ್ಲಿ ಭಾರೀ ಪ್ರಯೋಜನವಾಗಲಿದೆ. 2023 ಹೂಡಿಕೆಗೆ ಉತ್ತಮವಾಗಿರಲಿದೆ. 

ಧನು ರಾಶಿ : ಮನೆ , ನಿವೇಶನ ಖರೀದಿ, ವಾಹನ, ಮದುವೆಯಂತಹ ಎಲ್ಲಾ ಕನಸುಗಳೂ ಈ ವರ್ಷ ಈಡೇರುತ್ತವೆ. ದೊಡ್ಡ ಮಟ್ಟದ ಆಸ್ತಿ ಸಂಪಾದನೆ  ಸಾಧ್ಯವಾಗುತ್ತದೆ. ಪೂರ್ವಿಕರ ಆಸ್ತಿ ಕೂಡಾ ಈ ವರ್ಷ ನಿಮ್ಮದಾಗಬಹುದು.  

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link