ಈ ರಾಶಿಯ ಹೆಣ್ಣು ಮಕ್ಕಳು ಪತಿಯ ಪಾಲಿಗೆ ಅದೃಷ್ಟ ಲಕ್ಷ್ಮಿ ಯರಂತೆ
ಜ್ಯೋತಿಷ್ಯದ ಪ್ರಕಾರ, ಪ್ರತಿ ರಾಶಿಗೆ ಅಧಿಪತಿ ಗ್ರಹವಿರುತ್ತದೆ. ಈ ಗ್ರಹದ ಪರಿಣಾಮವು ಸಂಬಂಧಪಟ್ಟ ವ್ಯಕ್ತಿಯ ಮೇಲೆ ಬೀಳುತ್ತದೆ. ಧರ್ಮಗ್ರಂಥಗಳಲ್ಲಿ ನಾಲ್ಕು ರಾಶಿಗಳ ಬಗ್ಗೆ ವಿವರಿಸಲಾಗಿದೆ. ಈ ರಾಶಿಯವರು ಪತಿಯ ಪಾಲಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ರಾಶಿ ಚಿಹ್ನೆಯ ಹುಡುಗಿಯರು, ಯಾರ ಜೀವನದಲ್ಲಿ ಬರುತ್ತಾರೆಯೋ, ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಯಾವುದೇ ಕೊರತೆಯಿರುವುದಿಲ್ಲ.
ಕುಂಭ ರಾಶಿಯ ಹುಡುಗಿಯರು, ಗಂಡಂದಿರ ಪಾಲಿಗೆ ಅದೃಷ್ಟಶಾಲಿ ಎನ್ನಲಾಗಿದೆ. ಈ ರಾಶಿಚಕ್ರದ ಹುಡುಗಿಯರು ಅತ್ಯಂತ ಕಾಳಜಿ ಪ್ರವೃತಿಯುಳ್ಳವರು. ಆತ್ಮವಿಶ್ವಾಸ ಮತ್ತು ಸ್ವತಂತ್ರ ಮನಸ್ಥಿತಿಯವರು. ಈ ರಾಶಿಯ ಹುಡುಗಿಯರು, ಯಾರ ಜೀವನದಲ್ಲಿ ಬರುತ್ತಾರೆಯೋ, ಅವರು ಪತಿಯ ಸರ್ವ ಕಷ್ಟದಲ್ಲಿ ಭಾಗಿಯಾಗುತ್ತಾರೆಯಂತೆ.
ಕರ್ಕ ರಾಶಿ : ಜ್ಯೋತಿಷ್ಯ ಪ್ರಕಾರ, ಕರ್ಕ ರಾಶಿಚಕ್ರದ ಹುಡುಗಿಯರು ತಮ್ಮ ಗಂಡಂದಿರ ಪಾಲಿಗೆ ಸಮೃದ್ಧಿಯ ಗಣಿಯಾಗಿ ಸಾಬೀತಾಗುತ್ತಾರಂತೆ. ಅವರು ಹೋಗುವ ಮನೆಯಲ್ಲಿ ಸಂಪತ್ತಿನ ಕೊರತೆಯಿರುವುದಿಲ್ಲ. ಈ ರಾಶಿಚಕ್ರದ ಹುಡುಗಿಯರು ಸಂಬಂಧದಲ್ಲಿ ಪ್ರಾಮಾಣಿಕರಾಗಿರುತ್ತಾರೆ.
ಮೀನ ರಾಶಿ : ಧರ್ಮಗ್ರಂಥಗಳ ಪ್ರಕಾರ, ಈ ರಾಶಿಯ ಹುಡುಗಿಯರು ಭಾವುಕರು ಮತ್ತು ಕಾಳಜಿ ಪ್ರವೃತಿಯವರಾಗಿರುತ್ತಾರೆ. ತನ್ನ ಗಂಡನ ಸಂತೋಷವನ್ನೇ ಸದಾ ಬಯಸುತ್ತಾಳೆ. ಈ ರಾಶಿಯವರು ಯಾರ ಜೀವನದಲ್ಲಿ ಪ್ರವೇಶಿಸುತ್ತಾರೋ ಅವರು ಪ್ರಗತಿಯನ್ನು ಸಾಧಿಸುತ್ತಾರೆ ಎಂದು ಹೇಳಲಾಗಿದೆ.
ಮಕರ ರಾಶಿ : ಈ ರಾಶಿಯ ಹುಡುಗಿಯರು ಗಂಡಂದಿರ ಪಾಲಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಹುಡುಗಿಯರು ತನ್ನ ಬುದ್ಧಿವನ್ತಿಕೆಯಿಂದ ಇಡೀ ಕುಟುಂಬವನ್ನು ಒಂದುಗೂಡಿಸಿ ನಡೆಸುತ್ತಾಳೆ. ಈ ರಾಶಿಯ ಹೆಣ್ಣು ಮಕ್ಕಳು ಹಿತ ಮಿತವಾಗಿ ಖರ್ಚು ಮಾಡುತ್ತಾರೆ.