ಈ ರಾಶಿಯ ಹೆಣ್ಣು ಮಕ್ಕಳ ಮೂಗ ತುದಿಯಲ್ಲಿರುತ್ತದೆಯಂತೆ ಕೋಪ, ಹಠದಿಂದಲೇ ಕೆಲಸ ಸಾಧಿಸಿ ಬಿಡುತ್ತಾರಂತೆ ಇವರು
ಮೇಷ ರಾಶಿಯ ಹುಡುಗಿಯರು ತುಂಬಾ ಧೈರ್ಯಶಾಲಿಗಳು.. ಆದರೆ ಮಹಾ ಕೋಪವುಳ್ಳವರು. ಈ ಹುಡುಗಿಯರು ಸಣ್ಣ ಸಣ್ಣ ವಿಷಯಗಳಿಗೂ ಕೋಪಗೊಳ್ಳುತ್ತಾರೆ. ಇದಲ್ಲದೆ, ತಮ್ಮ ಹಟವನ್ನು ಸಾಧಿಸುವುದರಲ್ಲಿಯೂ ಇವರು ಎತ್ತಿದ ಕೈ. ಏನಾದರು ಕೆಲಸ ಮಾಡಲು ನಿರ್ಧರಿಸಿದರೆ ಅದನ್ನು ಮಾಡಿಯೇ ಮುಗಿಸುತ್ತಾರೆ.
ವೃಷಭ ರಾಶಿಯ ಹುಡುಗಿಯರು ಹುಟ್ಟಿನಿಂದಲೂ ಹಠಮಾರಿ ಮತ್ತು ಕೋಪಡ ಸ್ವಭಾವದವರಾಗಿರುತ್ತಾರೆ. ಇವರು ಸುಳ್ಳನ್ನು ಎಂದಿಗೂ ಸಹಿಸುವುದಿಲ್ಲ. ಇವರಿಗೆ ಯಾರಾದರು ಮೋಸ ಮಾಡಿದರೆ, ಆ ವ್ಯಕ್ತಿಯನ್ನು ತನ್ನ ಜೀವನದಿಂದ ತೆಗೆದುಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಒಂದೊಂದು ಸಲ ಇವರ ಮೊಂಡುತನ ವಿಪರೀತಕ್ಕೆ ಹೋಗುತ್ತದೆ.
ಮಿಥುನ ರಾಶಿಯ ಜನರು ರಾಜತಾಂತ್ರಿಕರು. ಆದ್ದರಿಂದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂದು ಅವರಿಗೆ ತಿಳಿದಿದೆ ಮತ್ತು ಅವರು ವಿರಳವಾಗಿ ಕೋಪಗೊಳ್ಳುತ್ತಾರೆ, ಆದರೆ ಕೋಪಗೊಂಡಾಗ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಈ ರಾಶಿಚಕ್ರದ ಹುಡುಗಿಯರು ಕೆಟ್ಟ ವರ್ತನೆಗಳನ್ನು ಸಹಿಸುವುದಿಲ್ಲ
ಸಿಂಹ ರಾಶಿಯ ಹುಡುಗಿಯರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ, ಆದರೆ ಸಂಗಾತಿ ಮೋಸ ಮಾಡಲು ಪ್ರಯತ್ನಿಸಿದರೆ, ಸರಿಯಾಗಿಯೇ ಪಾಠ ಕಲಿಸುತ್ತಾರೆ. ಈ ಹುಡುಗಿಯರು ಸ್ವಾವಲಂಬಿಗಳಾಗಿರುತ್ತಾರೆ. ಅವರ ಹಠದಿಂದಲೇ ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತಾರೆ.
ವೃಶ್ಚಿಕ ರಾಶಿಯ ಹುಡುಗಿಯರು ಕೋಪದಲ್ಲಿ ತಮ್ಮ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಇವರಿಗೆ ಎಷ್ಟು ಬೇಗ ಕೋಪ ಬರುತ್ತದೆಯೋಅಷ್ಟೇ ಬೇಗ ಶಾಂತರಾಗುತ್ತಾರೆ.