ಚಿನ್ನದ ಉಂಗುರ ಹಾಕಿದರೆ ಮಾತ್ರ ಈ ರಾಶಿಯವರಿಗೆ ಅದೃಷ್ಟ !ಇದೇ ಬೆರಳಿಗೆ ಹಾಕಿರುವ ಬಂಗಾರವಷ್ಟೇ ಬೆಳಗುವುದು ಇವರ ಬಾಳು
ಚಿನ್ನ ಅತ್ಯಂತ ದುಬಾರಿ ಲೋಹ, ಸಿರಿವಂತಿಕೆಯ ಸಂಕೇತ ಕೂಡಾ ಹೌದು. ಹಾಗಂತ ಎಲ್ಲರೂ ಚಿನ್ನ ಧರಿಸುವುದು ಜ್ಯೋತಿಷ್ಯದ ಪ್ರಕಾರ ಸರಿಯಲ್ಲ.
ಇನ್ನು ಕೆಲವರು ಮೈ ಮೇಲೆ ಒಂದು ತುಂಡಾದರೂ ಚಿನ್ನ ಧರಿಸಲೇ ಬೇಕು, ಚಿನ್ನ ಧರಿಸಿದರೆ ಮಾತ್ರ ಈ ರಾಶಿಯವರ ಅದೃಷ್ಟ ಕೈ ಹಿಡಿಯುವುದು. ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಎಂದಾದರೆ ಅದರಲ್ಲಿ ಯಶಸ್ಸು ಸಿಗುವುದು ಗ್ಯಾರಂಟಿ.
ಸಿಂಹ ರಾಶಿ : ಸಿಂಹ ರಾಶಿಯು ಬೆಂಕಿಯ ಅಂಶದ ರಾಶಿಯಾಗಿದೆ.ಇವರ ಅಧಿಪತಿ ಸೂರ್ಯ. ಈ ಕಾರಣಕ್ಕಾಗಿ, ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು. ಚಿನ್ನದ ಉಂಗುರ ಧರಿಸಿದರೆ ಇವರ ಅದೃಷ್ಟವನ್ನು ತಡೆಯುವವರೇ ಇಲ್ಲ.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಐಷಾರಾಮಿ ಜೀವನ ನಡೆಸುವುದು ಎಂದರೆ ಬಲು ಪ್ರೀತಿ. ಇವರ ಐಶಾರಮ ಜೀವನ ಪೂರ್ತಿ ಇರಬೇಕಾದರೆ ಇವರ ಮೇ ಮೇಲೆ ಒಂದು ತುಂಡಾದರೂ ಚಿನ್ನ ಇರಲೇ ಬೇಕು. ಉಂಗುರ, ಚೈನ್ ಅಥವಾ ಬಳೆ ಹೀಗೆ ಯಾವ್ ರೂಪದಲ್ಲಿ ಆದರೂ ಸರಿ ಚಿನ್ನ ಧರಿಸಬೇಕು.
ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಶುಕ್ರ. ಚಿನ್ನವನ್ನು ಧರಿಸುವುದು ಶುಕ್ರನಿಗೆ ಒಳ್ಳೆಯದು. ಹಾಗಾಗಿ ತುಲಾ ರಾಶಿಯವರ ಅದೃಷ್ಟ ಕೋಟೆಗೆ ನಿಲ್ಲಬೇಕಾದರೆ ಚಿನ್ನದ ಉಂಗುರವನ್ನು ಧರಿಸಲೇ ಬೇಕು.
ಧನು ರಾಶಿ : ಧನು ರಾಶಿಯ ಅಧಿಪತಿ ಗುರು.ಚಿನ್ನಕ್ಕೂ ಗುರುಗ್ರಹಕ್ಕೂ ಆಳವಾದ ಸಂಬಂಧವಿದೆ.ಹಾಗಾಗಿ ಧನು ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಜೀವನದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತದೆ.ಆದ್ದರಿಂದ ಈ ರಾಶಿಯವರು ಚಿನ್ನದ ಉಂಗುರವನ್ನು ಧರಿಸಬೇಕು.
ತೋರು ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಇದಲ್ಲದೆ, ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿನ ಅಡೆತಡೆಗಳು ದೂರವಾಗುತ್ತವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.