ಈ ರಾಶಿಯವರು ಬಾಯಿ ಬಿಟ್ಟರೆ ಬರೀ ಸುಳ್ಳೇ ಹೇಳೋದು! ಮೋಸ ಮಾಡೋದ್ರಲ್ಲಿ ಇವರಷ್ಟು ನಿಸ್ಸೀಮರು ಬೇರಾರು ಇರಲ್ಲ!
ಜ್ಯೋತಿಷ್ಯದ ಪ್ರಕಾರ, ಕೆಲ ರಾಶಿಯವರು ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರಂತೆ. ಜೊತೆಗೆ ಇವರ ಸುಳ್ಳುಗಳನ್ನು ಸುಲಭವಾಗಿ ಪತ್ತೆ ಹಚ್ಚುವುದು ಕೂಡ ಕಷ್ಟವಂತೆ. ಅಷ್ಟಕ್ಕೂ ಆ ರಾಶಿಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ.
ಮಿಥುನ ರಾಶಿ: ಮಿಥುನ ರಾಶಿಯ ಕೆಲ ಜನರು ಕಟ್ಟುಕಥೆ ಸೃಷ್ಟಿಸೋದರಲ್ಲಿ ನಿಪುಣರಾಗಿರುತ್ತಾರೆ. ಅಷ್ಟೇ ಅಲ್ಲ ಇವರು ಸುಳ್ಳು ಹೇಳಿದರೆ ಯಾರಿಂದಲೂ ಸುಲಭವಾಗಿ ಪತ್ತೆ ಮಾಡೋಕೆ ಸಾಧ್ಯವಾಗುವುದಿಲ್ಲವಂತೆ. ಒಬ್ಬ ವ್ಯಕ್ತಿಯನ್ನು ಮೆಚ್ಚಿಸಲು ಸುಳ್ಳು ಹೇಳಲು ಹಿಂಜರಿಯುವುದಿಲ್ಲ ಈ ರಾಶಿಯ ಕೆಲ ಜನರು.
ತುಲಾ ರಾಶಿ: ತುಲಾ ರಾಶಿಯ ಜನರು ಸ್ವಭಾವತಃ ಭಾವನಾತ್ಮಕವಾಗಿರುತ್ತಾರೆ. ಆದರೆ ಇವರು ಸುಳ್ಳು ಹೇಳುವುದರಲ್ಲಿ ಎಂಥವರನ್ನೂ ಮೀರಿಸುತ್ತಾರಂತೆ. ಕೆಲವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಸುಳ್ಳು ಹೇಳುತ್ತಾರಂತೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಕೆಲ ಜನರು ಸ್ವತಃ ನಿಗೂಢ ಗುಣವನ್ನು ಹೊಂದಿರುತ್ತಾರೆ. ಆದ್ದರಿಂದಲೇ ಯಾವುದೇ ಪರಿಸ್ಥಿತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸುಳ್ಳು ಹೇಳುತ್ತಾರೆ, ಇವರು ಸುಳ್ಳು ಹೇಳುವಲ್ಲಿ ಸಾಕಷ್ಟು ಪ್ರವೀಣರಾಗಿರುತ್ತಾರಂತೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)