ಈ ರಾಶಿಯವರು Love Marriageನಲ್ಲಿ ವಿಶ್ವಾಸವುಳ್ಳವರು, ಪ್ರೀತಿ ನಿಭಾಯಿಸುವುದರಲ್ಲಿ ಎತ್ತಿದ ಕೈಯಂತೆ
ಕೆಲವು ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ನಂತರ ಅವರೊಂದಿಗೆ ಮದುವೆಯಾಗಲು ಯಾವ ಮಟ್ಟಿಗೆ ಬೇಕಾದರೂ ಹೋಗುತ್ತಾರೆ. ಈ ಕಾರಣದಿಂದಲೇ , ಈ ರಾಶಿಯ ಜನರು ಒಂದೋ ಬಹಳ ಬೇಗನೇ ಮದುವೆಯಾಗುತ್ತಾರೆ. ಅಥವಾ ಬಹಳ ತಡವಾಗಿ ಮದುವೆಯಾಗುತ್ತಾರೆ. ಅವರು ಪ್ರೀತಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಅವರ ಆಯ್ಕೆಯ ಸಂಗಾತಿಯನ್ನು ಮಾತ್ರ ಮದುವೆಯಾಗುತ್ತಾರೆ.
ಮೇಷ ರಾಶಿಯ ಜನರು ಅರೇಂಜ್ಡ್ ಮ್ಯಾರೇಜ್ ಆಗಲು ಇಷ್ಟಪಡುವುದಿಲ್ಲ. ತಮ್ಮ ಆಯ್ಕೆಯ ಸಂಗಾತಿಯೊಂದಿಗೆ ಜೀವನವನ್ನು ಕಳೆಯುವುದರಲ್ಲಿ ನಂಬಿಕೆ ಇಟ್ಟಿರುತ್ತಾರೆ. ಈ ಜನರು ತಮ್ಮ ಪ್ರೀತಿ ಪಡೆಯಲು ಏನು ಬೇಕಾದರೂ ಮಾಡುತ್ತಾರೆ.
ಮಕರ ರಾಶಿಯ ಜನರು ಕೂಡಾ, ಪ್ರೀತಿಯ ವಿಷಯದಲ್ಲಿ ಅದೃಷ್ಟವಂತರು. ಈ ರಾಶಿಯ ಜನರು ಕೂಡಾ ಹೆಚ್ಚಾಗಿ ಪ್ರೇಮ ವಿವಾಹವನ್ನೇ ಆಗುತ್ತಾರೆ. ಇವರು ತಮ್ಮ ಸಂಗಾತಿಯನ್ನು ಜೀವನ ಪೂರ್ತಿ ಸಂತೋಷವಾಗಿರಿಸುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ ಮತ್ತು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಉತ್ತಮ ದಾಂಪತ್ಯ ಜೀವನವನ್ನು ಆನಂದಿಸುತ್ತಾರೆ.
ಕುಂಭ ರಾಶಿಚಕ್ರದ ಜನರು ಸಹ ಅರೇಂಜ್ಡ್ ಮ್ಯಾರೇಜನ್ನು ಇಷ್ಟಪಡುವುದಿಲ್ಲ. ಈ ಜನರು ತಮ್ಮ ಜೀವನ ಸಂಗಾತಿಯನ್ನು ಸಂತೋಷವಾಗಿಡಲು ಮತ್ತು ಅವರ ಸಂಬಂಧವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಾರೆ.