ಹೊಸ ವರ್ಷ ಆರಂಭವಾಗುವುದೇ ಗಜಕೇಸರಿ ಯೋಗದಿಂದ ! ಈ ರಾಶಿಯವರಿಗೆ ಅದೃಷ್ಟದ ವರ್ಷ ಇದು !ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನಕ್ಕೆ ಏರುವ ವರ್ಷ
ಇನ್ನೊಂದು ವಾರ ಕಳೆದರೆ ಹೊಸ ವರ್ಷ ಆರಂಭವಾಗುವುದು. ಹೊಸ ವರ್ಷದ ಆರಂಭದಲ್ಲಿಯೇ ಗಜಕೆಸರಿ ಯೋಗ ರೂಪುಗೊಳ್ಳುತ್ತಿದೆ. ಮಿಥುನ ರಾಶಿಯಲ್ಲಿ ಚಂದ್ರ ಮತ್ತು ಗುರು ಗ್ರಹದ ಸಂಯೋಗವಿದ್ದು, ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ.
ಗಜಕೇಸರಿ ಯೋಗ ಎನ್ನುವುದು ಅತ್ಯಂತ ಶ್ರೇಷ್ಠವಾದ ರಾಜಯೋಗ. ಚಂದ್ರ ಮತ್ತು ಗುರು ಗ್ರಹ ಒಂದೇ ರಾಶಿಯಲ್ಲಿ ಸೇರಿದಾಗ ಮಾತ್ರ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ.
ಗಜಕೇಸರಿ ಯೋಗ ನಿರ್ಮಾಣವಾಗುತ್ತಿರುವುದರಿಂದ ಕೆಲವು ರಾಶಿಯವರಿಗೆ ವರ್ಷದ ಆರಂಭದಿಂದಲೇ ಅದೃಷ್ಟ ಕೈ ಹಿಡಿಯುವುದು.
ಮಿಥುನ ರಾಶಿ : ಈ ವರ್ಷ ಪೂರ್ತಿ ಗೆಲುವು, ನಲಿವಿನೊಂದಿಗೆ ಕಳೆಯುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯುವುದು. ನಿಮ್ಮ ಎಲ್ಲಾ ಕನಸುಗಳು ಈಡೇರುವ ವರ್ಷ ಇದು.
ಕನ್ಯಾ ರಾಶಿ :ಮನದ ಸಣ್ಣ ಸಣ್ಣ ಆಸೆಯೂ ಈಡೇರುವುದು.ಹೊಸ ಕೆಲಸ ಆರಂಭಿಸಲು ಇದು ಸರಿಯಾದ ಸಮಯ. ಹೊಸ ಮನೆ ನಿರ್ಮಾಣ, ಅಥವಾ ಖರೀದಿ ಭಾಗ್ಯ ಒಲಿದು ಬರುವುದು.
ಧನು ರಾಶಿ :ಇಲ್ಲಿಯವರೆಗೆ ಸೋಲಿನಿಂದ ಕಂಗೆಟ್ಟಿದ್ದ ನಿಮಗೆ ಈ ವರ್ಷ ಬರೀ ಯಶಸ್ಸು ನಿಮ್ಮದಾಗುವುದು. ಅತ್ಯಂತ ಉನ್ನತ ಸ್ಥಾನಕ್ಕೆ ಏರುವಿರಿ. ಇಷ್ಟು ಕಾಲದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ವರ್ಷ ಇದು.
ಮೀನರಾಶಿ :ಆದಾಯದ ಮೂಲಗಳು ತೆರೆದುಕೊಳ್ಳುವುದು. ಆರ್ಥಿಕ ಜೀವನ ಸದೃಢವಾಗುವುದು. ನೆಮ್ಮದಿ ಹೆಚ್ಚಾಗುವುದು.
ಸೂಚನೆ : ಈ ಲೇಖನದಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.