ಈ ರಾಶಿಯವರನ್ನು ಹೆಜ್ಜೆ ಹೆಜ್ಜೆಯಲ್ಲಿಯೂ ಹರಸುತ್ತಿದ್ದಾನೆ ಶನಿ ದೇವ! ಸೋಲನ್ನು ಹತ್ತಿರವೂ ಸುಳಿಯಲು ಬಿಡನು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವ ಮತ್ತು ರಾಹುವಿನ ನಡುವೆ ಉತ್ತಮ ಬಾಂಧವ್ಯವಿದೆ. ಶನಿ ಮಾರ್ಚ್ 15 ರಂದು, ನಕ್ಷತ್ರ ಬದಲಿಸಿ ರಾಹುವಿನ ನಕ್ಷತ್ರವಾದ ಶತಭಿಶಕ್ಕೆ ಪ್ರವೇಶಿಸಿದ್ದಾನೆ. ಶನಿಯ ನಕ್ಷತ್ರ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಯವರ ಜೀವನದ ಮೇಲೆ ಕಾಣಬಹುದು. ಅದರಲ್ಲೂ ಕೆಲವು ರಾಶಿಯವರ ಜೀವನದ ಮೇಲೆ ಇದರ ವಿಶೇಷ ಪ್ರಭಾವ ಇರುತ್ತದೆ.
ಶನಿಯ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ನಿಮ್ಮ ಸಂಕ್ರಮಣ ಜಾತಕದಲ್ಲಿ ಶನಿ ದೇವನು ಕರ್ಮದ ಅಧಿಪತಿ. ಶನಿಯು ಲಾಭದ ಮನೆಯಲ್ಲಿದ್ದಾನೆ. ಹೀಗಿರುವಾಗ ಮೇಷ ರಾಶಿಯವರ ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳಾಗುತ್ತದೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರಿಗೆ ಈ ಬಾರಿ ಉದ್ಯೋಗ ಪಕ್ಕಾ ಎನ್ನಬಹುದು.
ಶನಿದೇವನ ನಕ್ಷತ್ರ ಬದಲಾವಣೆಯು ಈ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯ ಅಧಿಪತಿ ಬುಧ. ಬುಧ ಮತ್ತು ಶನಿಯ ಮಧ್ಯೆ ಉತ್ತಮ ಸ್ನೇಹವಿದೆ. ಈ ರಾಶಿಯ ಸಂಕ್ರಮಣ ಜಾತಕದಲ್ಲಿ, ಎಂಟು ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿ ಅದೃಷ್ಟದ ಸ್ಥಳದಲ್ಲಿ ಸ್ಥಿತವಾಗಿದೆ. ಇದರಿಂದ ವಿದೇಶ ಯಾನ ಯೋಗ ಕೂಡಿ ಬರುವುದು. ನಿಮಗೆ ಗೊತ್ತಿಲ್ಲದ ಮೂಲಗಳಿಂದಲೂ ಹಣ ಹರಿದು ಬರುವುದು.
ಶನಿಯ ನಕ್ಷತ್ರ ಬದಲಾವಣೆಯು ಈ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಸಂಕ್ರಮಣ ಜಾತಕದಲ್ಲಿ ಆರನೇ ಮತ್ತು ಏಳನೇ ಮನೆಯ ಅಧಿಪತಿಯಾದ ಶನಿಯು ವೈವಾಹಿಕ ಜೀವನದ ಮನೆಯಲ್ಲಿದ್ದಾನೆ. ಈ ಸ್ಥಿತಿಯಲ್ಲಿ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡಲು ಯೋಚಿಸುತ್ತಿದ್ದರೆ ಅದು ಲಾಭದಾಯಕವಾಗಿರುತ್ತದೆ.
ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶದಿಂದ ಈ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ನಿಮ್ಮ ಸಂಕ್ರಮಣದ ಜಾತಕದ ಐದನೇ ಮತ್ತು ನಾಲ್ಕನೇ ಮನೆಯ ಅಧಿಪತಿಯಾಗಿ ಶನಿದೇವನು ಆದಾಯದ ಸ್ಥಳದಲ್ಲಿ ಕುಳಿತಿದ್ದಾನೆ. ಇದರೊಂದಿಗೆ ಕೇಂದ್ರ ತ್ರಿಕೋನವು ರಾಜಯೋಗ ನಿರ್ಮಾಣವಾಗಿ, ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)