ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !
ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, 2025 ರ ಆರಂಭದಲ್ಲಿಅಂದರೆ ಜ.3 ರಂದು ಸೂರ್ಯ-ಗುರು ಗ್ರಹದ ಕಾರಣದಿಂದ ಷಡಷ್ಟಕ ದೃಷ್ಟಿ ಯೋಗ ರೂಪುಗೊಳ್ಳುತ್ತಿದೆ. ಈ ವಿಶೇಷ ಯೋಗವು 3 ರಾಶಿಯವರಿಗೆ ಮಂಗಳಕರವಾಗಿರುತ್ತದೆ.
ಹೊಸ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಈ ಅದ್ಭುತ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಕಾರಣದಿಂದ ಕೆಲವು ರಾಶಿಯವರ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿರಲಿದೆ.
ಸಿಂಹ ರಾಶಿ : ವ್ಯವಹಾರದಲ್ಲಿ ಪ್ರಚಂಡ ಆರ್ಥಿಕ ಪ್ರಗತಿ ಕಾಣುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಧನಾತ್ಮಕ ಸುಧಾರಣೆ ಇರುತ್ತದೆ. ಕಚೇರಿ ಕೆಲಸದಲ್ಲಿಯೂ ನಿಮ್ಮ ಮಾತಿಗೆ ಪ್ರಾಶಸ್ತ್ಯ ಸಿಗುವುದು. ನೀವು ಇಲ್ಲಿಯವರೆಗೆ ನಿರೀಕ್ಷಿಸುತ್ತಿದ್ದ ಉದ್ಯೋಗದ ಆಫರ್ ಬರುವುದು.
ಧನು ರಾಶಿ : ಉದ್ಯೋಗದಲ್ಲಿ ಬಡ್ತಿ ಸಿಗುವುದು. ವ್ಯಾಪಾರ ಮಾಡುವವರಿಗೆ ಆರ್ಥಿಕ ಪ್ರಗತಿಯಾಗುವುದು. ನೀವು ಮಣ್ಣು ಮುಟ್ಟಿದರೂ ಹೊಂನಾಗುವ ವರ್ಷವಿದು. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.ಮನೆ ನಿರ್ಮಾಣದ ಕನಸು ಈಡೇರುವುದು.
ಮೀನ ರಾಶಿ :ಹೊಸ ವರ್ಷದ ಮೊದಲ ವಾರವೇ ಬಹಳ ಲಾಭದಾಯಕವಾಗಿರುವುದು. ವ್ಯಾಪಾರದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರಬಹುದು. ಆರೋಗ್ಯ ಚೆನ್ನಾಗಿರುತ್ತದೆ.ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)