ಅವರೆಲ್ಲ ಹೊಟೇಲ್‌ನಲ್ಲಿ ನನ್ನ ಬಳಸಿಕೊಂಡು ಮೋಸ ಮಾಡಿದರು..! ಚರ್ಚೆಗೆ ಕಾರಣವಾಯ್ತು ನಟಿ ಶ್ರುತಿ ಹಾಸನ್ ಕಾಮೆಂಟ್

Sun, 20 Oct 2024-2:14 pm,

ಕಾಲಿವುಡ್ ಸ್ಟಾರ್ ಹೀರೋ ಕಮಲ್ ಹಾಸನ್ ಮಗಳಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ಶ್ರುತಿ ಹಾಸನ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರು ಉದ್ಯಮಕ್ಕೆ ಪ್ರವೇಶಿಸಿದಾಗ ಐರನ್ ಲೆಗ್ ಆಗಿ ಗುರುತಿಸಿಕೊಂಡರು ಮತ್ತು ನಂತರ ಪವನ್ ಕಲ್ಯಾಣ್ ಅಭಿನಯದ ಗಬ್ಬರ್ ಸಿಂಗ್ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು.   

ಅದಾದ ನಂತರ ಹಲವು ಸ್ಟಾರ್ ಹೀರೋಗಳ ಜೊತೆ ಒಡನಾಟ ಹೊಂದಿದ್ದ ಈಕೆ.. ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಖ್ಯಾತಿ ಪಡೆದರು. ಇತ್ತೀಚೆಗಷ್ಟೇ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಹೀರೋಯಿನ್ ಆದರು.   

ಒಂದು ರೀತಿಯಲ್ಲಿ ಶ್ರುತಿ ಹಾಸನ್ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ಕಾರಣಗಳಿಗಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಈಕೆ ಹೆಚ್ಚಾಗಿ ಲವ್‌ ಮತ್ತು ಡೇಟಿಂಗ್‌ ವಿಚಾರವಾಗಿ ಸುದ್ದಿಯಲ್ಲಿರುತ್ತಾಳೆ.. ಡೇಟಿಂಗ್‌, ಲವ್‌, ಮದುವೆವರೆಗೂ ಹೋಗಿ ಮತ್ತೆ ಬ್ರೇಕ್‌ ಅಪ್‌....  

ಕೊನೆಗೆ ಡೂಡಲ್ ಕಲಾವಿದ ಶಾಂತನ್ ನನ್ನು ಪ್ರೀತಿಸಿ ಇತ್ತೀಚೆಗಷ್ಟೇ ಅವನೊಂದಿಗೆ ಬೇರ್ಪಟ್ಟು ಹೊಸ ಬಾಯ್ ಫ್ರೆಂಡ್‌ಗಾಗಿ ಹುಡುಕಾಟ ನಡೆಸಿದ್ದಾಳೆ ಶೃತಿ. ಈ ಹಿನ್ನಲೆಯಲ್ಲಿ ಆಕೆಯ ಇತ್ತೀಚಿನ ಕಾಮೆಂಟ್‌ಗಳು ಭಾರೀ ವೈರಲ್ ಆಗುತ್ತಿವೆ. ತನ್ನನ್ನು ಎಲ್ಲರೂ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಶ್ರುತಿ ಹಾಸನ್ ನೋವು ಹೊರ ಹಾಕಿದ್ದಾರೆ..  

'ಮಧ್ಯಾಹ್ನ, ರಾತ್ರಿಯ ಊಟ, ಉಪಹಾರಕ್ಕೆ ನನ್ನೊಂದಿಗೆ ಹಲವರು ಬರುತ್ತಿದ್ದರು. ಒಟ್ಟಿಗೆ ಹೋಟೆಲ್‌ ಹೋದರೆ ನಾನೇ ಬಿಲ್ ಕಟ್ಟುತ್ತಿದ್ದೆ.. ಹೀಗಾಗಿ ಬಹಳಷ್ಟು ಹಣವನ್ನು ಕಳೆದುಕೊಂಡೆ. ಅದರಲ್ಲೂ ಹೆಚ್ಚಾಗಿ ಹುಡುಗರಿಗೆ ಬಿಲ್‌ ಕಟ್ಟುತ್ತಿದೆ.. ಹೀಗಾಗಿ ನಾನು ಹಲವರನ್ನು ನಂಬಿ ಹಣದ ವಿಚಾರದಲ್ಲಿ ಮೋಸ ಹೋಗಿದ್ದೆ’ ಎಂದು ಹೇಳಿದ್ದಾರೆ.    

ಉಳಿದಂತೆ ಸದ್ಯ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದಲ್ಲಿ ಶೃತಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಡಿಕಾಯ್ಟ್ ಚಿತ್ರದಲ್ಲಿ ಈ ಸುಂದರಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.. ಅಡಿವಿ ಶೇಶ್ ಅಭಿನಯದ ಈ ಸಿನಿಮಾ ಅರ್ಧದಷ್ಟು ಶೂಟಿಂಗ್ ಮುಗಿಸಿದೆ...    

ZEENEWS TRENDING STORIES

By continuing to use the site, you agree to the use of cookies. You can find out more by Tapping this link