ಮನೆಯಲ್ಲಿ ಕಿರಿ ಕಿರಿ ಉಂಟು ಮಾಡುವ ಇರುವೆ, ಕೀಟಗಳಿಂದ ಮುಕ್ತಿ ನೀಡುತ್ತದೆ ಈ ವಸ್ತುಗಳು
ಯಾವಾಗಲೂ ಅಡುಗೆಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಶುಚಿತ್ವವನ್ನು ಕಾಪಾಡುವುದರಿಂದ ಇರುವೆ ಮತ್ತು ಕೀಟಗಳನ್ನು ಶಾಶ್ವತವಾಗಿ ಮನೆಯಿಂದ ದೂರ ಇಡಬಹುದು.
ಉಪ್ಪು ಪ್ರತಿ ಅಡುಗೆಮನೆಯಲ್ಲಿಯೂ ಇರುತ್ತದೆ. ಇರುವೆಗಳ ಸಮಸ್ಯೆ ತೀವ್ರವಾಗಿದ್ದರೆ ಉಪ್ಪು ನೀರನ್ನು ಸಿಂಪಡಿಸಬೇಕು.
ಇರುವೆ, ಕೀಟಗಳನ್ನು ತೊಡೆದುಹಾಕಲು, ಮನೆಯ ಪ್ರತಿ ಮೂಲೆಯಲ್ಲಿ ಬೇವಿನ ಎಣ್ಣೆಯನ್ನು ಹಾಕಬೇಕು. ಇದರೊಂದಿಗೆ ಕೆಲವೇ ನಿಮಿಷಗಳಲ್ಲಿ ಇರುವೆ ಮತ್ತು ಕೀಟಗಳನ್ನು ಓಡಿಸಬಹುದು.
ಅಡುಗೆಮನೆಯ ಪ್ರತಿಯೊಂದು ಮೂಲೆಯಲ್ಲಿ ಬೆಳ್ಳುಳ್ಳಿ ಎಣ್ಣೆಯನ್ನು ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ಕೀಟಗಳು ನಿಮ್ಮ ಅಡುಗೆಮನೆಗೆ ಬರುವುದಿಲ್ಲ.
ನಿಂಬೆ ನೀರಿನಿಂದ ಅಡುಗೆ ಕೋಣೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಬಹುದು. ಇರುವೆ ಮತ್ತು ಕೀಟಗಳನ್ನು ಓಡಿಸಲು ನಿಂಬೆ ರಸ ಸಹಾಯಕವಾಗಿದೆ. ಕೀಟಗಳು ಮತ್ತು ಇರುವೆಗಳು ಕಾಣಿಸಿಕೊಂಡ ಸ್ಥಳದಲ್ಲಿ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಬಹುದು.