ಒಂದಲ್ಲ, ಎರಡಲ್ಲ ಈ ನಟಿ ಬರೋಬ್ಬರಿ 160 ಮಕ್ಕಳ ತಾಯಿ.. ಹಲವು ಸ್ಟಾರ್‌ ನಟರ ಜೊತೆ ಸಂಬಂಧ..!

Thu, 18 Jul 2024-12:39 pm,

160 ಮಕ್ಕಳನ್ನು ಹೊಂದಿರುವ ಈ ಬಾಲಿವುಡ್ ನಟಿ ಯಾರು ಎಂದು ನೀವು ಆಶ್ಚರ್ಯ ಪಡಬಹುದು. ಹೌದು... ಇದು ಸಂಪೂರ್ಣ ಸತ್ಯ. ಇಂದಿನ ಕಾಲದಲ್ಲಿ ಈ ರೀತಿಯ ಸುದ್ದಿಗಳು ಬಹುಷಃ ಸುಳ್ಳು ಎನಿಸಬಹದು.. ಬನ್ನಿ ಆ ಮಾಹಾತಾಯಿ ಯಾರು..? ಅಸಲಿಗೆ ಕಥೆ ಏನು..? ಬನ್ನಿ ತಿಳಿಯೋಣ..  

90 ರ ದಶಕದ ಸೂಪರ್‌ಹಿಟ್ ನಾಯಕಿ ಆಯೇಷಾ ಜುಲ್ಕಾ, ಅಂದಿನ ಕಾಲದಲ್ಲಿ ದೊಡ್ಡ ಸೂಪರ್‌ಸ್ಟಾರ್‌ ನಟರೊಂದಿಗೆ ನಟಿಸಿ ಖ್ಯಾತಿ ಪಡೆದಿದ್ದರು. ಶ್ರೀನಗರದ ಸುಂದರ ವಾಡಿಯೋದಲ್ಲಿ ಬೆಳೆದ ಆಯೇಷಾ ಝುಲ್ಕಾಗೆ ಈಗ 52 ವರ್ಷ.   

ಪದವಿ ತನಕ ಓದಿದ ಆಯೇಷಾ ನಂತರ ಬಾಲಿವುಡ್ ಪ್ರವೇಶಿಸಿದರು. 1989 ರಲ್ಲಿ 'ಕೈಸೆ ಕೈಸೆ ಲೋಗ್' ಎಂಬ ಸಿನಿಮಾದ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು.. ಈಗ ಅವರು ಮುಂಬೈನ ಅಂಧೇರಿ ತ್ರಿಪಾಠಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.    

ಆಯೇಷಾ ಝುಲ್ಕಾ ಅವರ ಹೆಸರು ದೊಡ್ಡ ತಾರೆಯರೊಂದಿಗೆ ತಳುಕು ಹಾಕಿಕೊಂಡ ಸಮಯವಿತ್ತು. ಮಿಥುನ್ ಚಕ್ರವರ್ತಿ, ಅಕ್ಷಯ್ ಕುಮಾರ್, ಅರ್ಮಾನ್ ಕೊಹ್ಲಿ ಅವರಂತಹ ಸೆಲೆಬ್ರಿಟಿಗಳೊಂದಿಗೆ ಆಯೇಷಾ ಜುಲ್ಕಾ ಹೆಸರು ಹೇಳಿ ಬಂದಿತ್ತು. ಅಂತಹ ಸಮಯದಲ್ಲೇ ನಟಿ ಸಿನಿರಂಗ ಬಿಟ್ಟು ಉದ್ಯಮಿ ಸಮೀರ್ ವಾಶಿಯನ್ನು ಮದುವೆಯಾಗಿ ಸಂಸಾರಿಕ ಜೀವನಕ್ಕೆ ಕಾಲಿಟ್ಟರು..   

ಆಯೇಷಾ ಝುಲ್ಕಾ ಅವರ ತಂದೆ ಇಂದ್ರ ಕುಮಾರ್ ಝುಲ್ಕಾ ವಾಯುಪಡೆಯ ವಿಂಗ್ ಕಮಾಂಡರ್. ಆಯೇಷಾಗೆ ಅಪರ್ಣಾ, ಜುಲ್ಕಾ ಎಂಬ ಸಹೋದರಿಯೂ ಇದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇಂದು ಅವರು 82 ಕೋಟಿಗೂ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಇದು ಅಧಿಕೃತವಲ್ಲ..  

ಈಗ ಆಯೇಷಾ ಜುಲ್ಕಾ ಅವರ ಮಕ್ಕಳ ಬಗ್ಗೆ ತಿಳಿಯೋಣ... ಆಯೇಷಾಗೆ 160 ಮಕ್ಕಳಾಗಿದ್ದು ಹೇಗೆ? ಮದುವೆಯಾಗಿ 31 ವರ್ಷಗಳಾದರೂ ಅವರಿಗೆ ಸ್ವಂತ ಮಕ್ಕಳಿಲ್ಲ ಎಂದು ಫಸ್ಟ್‌ ನಿಮಗೆ ಸ್ಪಷ್ಟ ಪಡಿಸುತ್ತೇವೆ.. ಆದರೆ ಅವರು ಗುಜರಾತ್‌ನಲ್ಲಿ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು, ಅಲ್ಲಿ 160 ಮಕ್ಕಳ ಊಟ, ವಸತಿ, ಶಿಕ್ಷಣ ಸೇರಿದಂತೆ ಅವರ ಎಲ್ಲಾ ವೆಚ್ಚವನ್ನು ಭರಿಸುತ್ತಾರೆ.  

ಇ-ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆಯೇಶಾ ಜುಲ್ಕಾ ಇದನ್ನು ಖಚಿತಪಡಿಸಿದ್ದಾರೆ. ಆಯೇಷಾ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಅವರ ಪತಿಯೂ ಸಹ ಬೆಂಬಲ ನೀಡಿದ್ದರು. ಇಂದು ಎರಡು ಗ್ರಾಮಗಳ 160 ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link