ಟೋಪಿ ಧರಿಸಿ ನಿಂತಿರುವ ಈ ಬಾಲಕ ಇಂದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ: ಚಿನ್ನದ ವಾಚ್ ಧರಿಸುವ ಈತ ಬರೋಬ್ಬರಿ 101 ಕೋಟಿ ಮೌಲ್ಯದ ಆಸ್ತಿ ಒಡೆಯ! ಯಾರೆಂದು ಗೆಸ್ ಮಾಡಿ
ಇಲ್ಲೊಂದು ಫೋಟೋ ಇದೆ. ಈ ಫೋಟೋದಲ್ಲಿ, ಒಬ್ಬ ಬಾಲಕ ತನ್ನ ತಾಯಿಯೊಂದಿಗೆ ಕ್ಯಾಪ್ ಧರಿಸಿ ನಿಂತಿರುವುದು ಕಾಣಬಹುದು. ಈತ ಯಾರೆಂದು ಗೆಸ್ ಮಾಡಬಲ್ಲಿರಾ? ಇದಕ್ಕೆ ಬೇಕಾದ ಸುಳಿವನ್ನು ಮುಂದೆ ನೀಡಲಾಗಿದೆ.
ಈ ಬಾಲಕ ಇಂದು ಟೀಂ ಇಂಡಿಯಾದ ಸ್ಟಾರ್ ಆಟಗಾರ. ಜೊತೆಗೆ ಈತ ಮದುವೆಯಾಗಿರೋದು ಬಾಲಿವುಡ್‌ನ ಖ್ಯಾತನೋರ್ವನ ಮಗಳನ್ನು. ಈತ ಸದ್ಯ 101 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ... ಇನ್ನೂ ಈ ಬಾಲಕ ಯಾರೆಂದು ತಿಳಿಯದಿದ್ದರೆ ಮುಂದೆ ಉತ್ತರ ನೀಡಿದ್ದೇವೆ.
ಈ ಬಾಲಕ ಬೇರಾರು ಅಲ್ಲ ಕೆಎಲ್ ರಾಹುಲ್. ರಾಹುಲ್ ಅವರು ತಮ್ಮ ತಾಯಿ ರಾಜೇಶ್ವರಿ ಜೊತೆ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಅಂದಹಾಗೆ ರಾಜೇಶ್ವರಿಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.
ಕೆಎಲ್ ರಾಹುಲ್ ಭಾರತ ತಂಡದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಮೈದಾನದ ಹೊರಗಿರುವಂತೆಯೇ ಮೈದಾನದಲ್ಲೂ ಶಾಂತವಾಗಿ ಮತ್ತು ಸೌಮ್ಯವಾಗಿ ವರ್ತಿಸುವ ಕೆಎಲ್ ರಾಹುಲ್ ಅವರ ಆಸ್ತಿ 101 ಕೋಟಿ ರೂ ಎಂದು ಹೇಳಲಾಗುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರ ನಿವ್ವಳ ಮೌಲ್ಯ 101 ಕೋಟಿ ರೂ.
ಕೆಎಲ್ ರಾಹುಲ್ ಬೆಂಗಳೂರಿನಲ್ಲಿ 65 ಲಕ್ಷ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಹೊಂದಿದ್ದು, ಗೋವಾದಲ್ಲಿ 7000 ಚದರ ಅಡಿ ವಿಸ್ತೀರ್ಣದ ಮನೆಯನ್ನೂ ಹೊಂದಿದ್ದಾರೆ. ಕಾರುಗಳ ಬಗ್ಗೆಯೂ ಹೆಚ್ಚು ಕ್ರೇಜ್ ಹೊಂದಿರುವ ಇವರು, ಲ್ಯಾಂಡ್ ರೋವರ್ ಡಿಫೆಂಡರ್ 110, ರೇಂಜ್-ರೋವರ್ ವೆಲಾರ್, ಲಂಬೋರ್ಘಿನಿ ಹುರಾಕನ್ ಸ್ಪೈಡರ್, ಆಡಿ ಆರ್ 8 ಮತ್ತು ಬಿಎಂಡಬ್ಲ್ಯು ಎಕ್ಸ್5 ನಂತಹ ಕಾರುಗಳನ್ನು ಹೊಂದಿದ್ದಾರೆ.
ವಾಚ್‌ಗಳೆಂದರೆ ಕೂಡ ರಾಹುಲ್‌ಗೆ ಬಹಳ ಇಷ್ಟ. ಅವರ ಬಳಿ 18 ಕ್ಯಾರೆಟ್ ರೋಸ್ ಗೋಲ್ಡ್ ರೋಲೆಕ್ಸ್ ಸ್ಕೈ-ಡ್ವೆಲ್ಲರ್ ವಾಚ್ ಇದೆ. ಇದರ ಬೆಲೆ 38 ಲಕ್ಷ ರೂ. ಇಷ್ಟು ಮಾತ್ರವಲ್ಲದೆ ಹಲವು ಲಕ್ಷ ರೂಪಾಯಿ ಮೌಲ್ಯದ ಹಲವು ವಾಚ್‌ಗಳನ್ನು ಹೊಂದಿದ್ದಾರೆ. ಕೆಎಲ್ ರಾಹುಲ್ ಅವರು ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ.