Chief Ministers Property: ದೇಶದ ಈ ಮುಖ್ಯಮಂತ್ರಿ ಹೆಸರಲ್ಲಿರೋದು ಕೇವಲ ಇಷ್ಟೇ ಸಂಪತ್ತು: ಇವರೇ ಬಡವ ಸಿಎಂ
ದೇಶದ ಅತ್ಯಂತ ಶ್ರೀಮಂತ ಸಿಎಂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ. ಸಿಎಂ ರೆಡ್ಡಿ 510 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ. ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಸ್ತಿ ಕೇವಲ 16.72 ಲಕ್ಷ ರೂ. ಬಡ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ಕೂಡ ಕೋಟ್ಯಾಧಿಪತಿ ಮುಖ್ಯಮಂತ್ರಿ. ಅರವಿಂದ್ ಕೇಜ್ರಿವಾಲ್ 3.44 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಕೋಟ್ಯಾಧಿಪತಿಯಾಗಿದ್ದಾರೆ. 3.34 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೆಸರೂ ಕೋಟ್ಯಾಧಿಪತಿ ಸಿಎಂಗಳ ಪಟ್ಟಿಯಲ್ಲಿ ಸೇರಿದೆ. ನಿತೀಶ್ ಕುಮಾರ್ 3.09 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಚುನಾವಣಾ ಆಯೋಗದಲ್ಲಿ ನೀಡಿರುವ ಅಫಿಡವಿಟ್ ಪ್ರಕಾರ ಭಗವಂತ್ ಮಾನ್ ಕೂಡ ಕೋಟ್ಯಾಧಿಪತಿ ಮುಖ್ಯಮಂತ್ರಿ. ಭಗವಂತ್ ಮಾನ್ 1.94 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಕೋಟ್ಯಾಧಿಪತಿ. 1.54 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಎನ್ ಬಿರೇನ್ ಸಿಂಗ್ ಮಣಿಪುರದ ಮುಖ್ಯಮಂತ್ರಿ. ಚುನಾವಣಾ ಆಯೋಗದಲ್ಲಿ ನೀಡಿರುವ ಅಫಿಡವಿಟ್ ಪ್ರಕಾರ 1.47 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ.
ಮನೋಹರ್ ಲಾಲ್ ಖಟ್ಟರ್ ಎರಡು ಅವಧಿಗೆ ಹರಿಯಾಣ ಸಿಎಂ ಆಗಿದ್ದರು. ಕೋಟ್ಯಾಧಿಪತಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಇವರೂ ಸೇರಿದ್ದಾರೆ. 1.27 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ ಕೋಟ್ಯಾಧಿಪತಿ. ಅಫಿಡವಿಟ್ ಪ್ರಕಾರ ಅವರ ಆಸ್ತಿ 1.18 ಕೋಟಿ ರೂ.