Weight Loss: ಹೊಟ್ಟೆ ಸುತ್ತಲಿನ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸುತ್ತೆ ಈ 5 ಹಸಿರು ಆಹಾರಗಳು
ದೀರ್ಘಕಾಲದ ಸಂಕೀರ್ಣ ಕಾಯಿಲೆಯಾಗಿರುವ ಸ್ಥೂಲಕಾಯತೆ ಅಥವಾ ಅಧಿಕ ತೂಕವು ಹಲವು ಆರೋಗ್ಯ ಸಮಸ್ಯೆಗಳಿಗೆ ಮೂಲವಾಗಿದೆ. ಹಾಗಾಗಿ, ತೂಕ ಇಳಿಕೆ ತುಂಬಾ ಮುಖ್ಯ. ಸ್ಥೂಲಕಾಯವನ್ನು ತೊಡೆದುಹಾಕಲು, ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ. ನಮ್ಮ ಮನೆಯಲ್ಲಿರುವ ಕೆಲವು ಹಸಿರು ಆಹಾರಗಳ ಸಹಾಯದಿಂದ ನೈಸರ್ಗಿಕ ತೂಕ ಇಳಿಕೆ ಸಾಧ್ಯ ಎಂದು ಹೇಳಲಾಗುತ್ತಿದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಮೂಂಗ್ ದಾಲ್/ಹಸಿರು ಕಾಳಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಸಮೃದ್ಧವಾಗಿದೆ. ಮಾತ್ರವಲ್ಲ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ , ಕಬ್ಬಿಣ, ಫೈಬರ್ ಮತ್ತು ಪ್ರೋಟೀನ್ ಕೂಡ ಕಂಡು ಬರುತ್ತದೆ. ಇದನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಬಹುದು.
ರಿಸರ್ಚ್ ಗೇಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿರು ಮೆಣಸಿನಕಾಯಿ ಕೊಬ್ಬಿನ ಚಯಾಪಚಯವನ್ನು ಸುಧಾರಿಸುತ್ತದೆ. ಇದು ತೂಕ ನಷ್ಟಕ್ಕೂ ಕೂಡ ಉತ್ತಮ ಕೊಡುಗೆ ನೀಡಬಲ್ಲದು ಎನ್ನಲಾಗುತ್ತದೆ.
ನಿಮಗೆಲ್ಲರಿಗೂ ತಿಳಿದಿರುವಂತೆ ಏಲಕ್ಕಿ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ಜೀರ್ಣಕ್ರಿಯೆಗೂ ಕೊಡುಗೆ ನೀಡುವುದರಿಂದ ದೈನಂದಿನ ಆಹಾರದಲ್ಲಿ ಏಲಕ್ಕಿ ಬಳಕೆಯಿಂದ ಆರೋಗ್ಯಕರ ತೂಕ ನಷ್ಟ ಸಾಧ್ಯವಾಗುತ್ತದೆ.
ಕರಿಬೇವಿನ ಎಲೆಗಳಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕ ಸ್ಥೂಲಕಾಯತೆಯನ್ನು ತಡೆಯುವ ಗುಣ ಹೊಂದಿರುವುದರಿಂದ ಇದು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ.
ತೂಕ ನಷ್ಟಕ್ಕೆ ಪ್ರಸಿದ್ಧ ಪಾನೀಯ ಎಂತಲೇ ಹೇಳಲಾಗುವ ಗೀನ್ ಟೀ ಅನ್ನು ನೀತಿ ಕುಡಿಯುವುದರಿಂದ ಇದು ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಸುಡಲು ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.