ಈ ಹಣ್ಣಿನ ಸಿಪ್ಪೆ ಸಾಕು ಹಲ್ಲುಗಳಲ್ಲಿ ಅಂಟಿ ಕುಳಿತ ಹಳದಿ ಕಲೆ 10 ನಿಮಿಷದಲ್ಲಿ ತೊಲಗುವುದು! ಪ್ರತಿನಿತ್ಯ ಹೀಗೆ ಬಳಸಿ 80 ದಾಟಿದ್ರೂ ಹುಳುಕಾಗಲ್ಲ, ದುರ್ವಾಸನೆಯೂ ಬರಲ್ಲ
ಹಲ್ಲು ಹಳದಿ ಆಗಲು ಮುಖ್ಯ ಕಾರಣ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಮತ್ತು ಕೆಟ್ಟ ಆಹಾರ ಪದ್ಧತಿ.
ಹಳದಿ ಪದರವು ಹಲ್ಲುಗಳ ಮೇಲೆ ಇರುತ್ತದೆ. ಇದು ಹಲ್ಲುಗಳಿಗೆ ಮಾತ್ರವಲ್ಲದೆ ವಸಡುಗಳಿಗೂ ಹಾನಿ ಉಂಟು ಮಾಡುತ್ತದೆ.
ಹಲ್ಲುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಕೊಳೆ ದೀರ್ಘಕಾಲ ಶೇಖರಣೆಗೊಂಡರೆ ಕುಳಿಗಳು, ಹಲ್ಲಿನಿಂದ ರಕ್ತಸ್ರಾವ, ವಸಡಿನಲ್ಲಿ ನೋವು, ಬಾಯಿ ದುರ್ವಾಸನೆ ಬರಲು ಶುರುವಾಗುತ್ತದೆ.
ಹಳದಿ ಹಲ್ಲುಗಳನ್ನು ತೊಡೆದುಹಾಕಲು ಕೆಲವು ಆಯುರ್ವೇದದ ಸಲಹೆಗಳಿವೆ. ಅದನ್ನು ನೀವು ಮನೆಯಲ್ಲಿ ಮಾಡಬಹುದು.
ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇವು ಹಲ್ಲಿನ ಹೊರ ಪದರದಲ್ಲಿರುವ ಹಳದಿ ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
ನಿಂಬೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಹಲ್ಲುಗಳ ಮೇಲೆ 2 ನಿಮಿಷಗಳ ಕಾಲ ಉಜ್ಜಿ ನಂತರ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿದರೆ, ಹಳದಿ ಹಲ್ಲು ಬಿಳಿಯಾಗುವುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)