photos : ಇವರೇ ನೋಡಿ CSK ಆಟಗಾರ Ruturaj Gaikwad ಹೃದಯ ಕದ್ದ ಬೆಡಗಿ

Wed, 15 Dec 2021-12:37 pm,

ಸಯಾಲಿ ಸಂಜೀವ್ ಅವರು, ನಾಸಿಕ್‌ನ ಎಚ್‌ಪಿಟಿ ಆರ್ಟ್ಸ್ ಮತ್ತು ಆರ್‌ವೈಕೆ ಸೈನ್ಸ್ ಕಾಲೇಜಿನಲ್ಲಿ ಬಿಎ ಪಾಲಿಟಿಕ್ಸ್ ಪದವಿ ಪಡೆದಿದ್ದಾರೆ. ಅವರು ತಮ್ಮ ಕಾಲೇಜಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ನಂತರ ಅವರು ನಟನೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಲು ನಿರ್ಧರಿಸಿದರು. ಅವರು Swarovski ಜೆಮ್ಸ್, Dentzz, Quikr ಮತ್ತು Birla Eyecare ಗೆ ಮಾಡೆಲಿಂಗ್ ಮಾಡಿದ್ದಾರೆ.  

ಸಯಾಲಿ ಸಂಜೀವ್ ಟಿವಿಯಲ್ಲಿ ಸುಶಾಂತ್ ಶೆಲಾರ್ ಅವರೊಂದಿಗೆ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಅವರು 9x ಝಾಕಾಸ್ ಟಾಪ್ ಸ್ಪರ್ಧೆಯ ಟಾಪ್-10 ಅತ್ಯುತ್ತಮ ನಾಯಕಿಯರ  ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 

ಮಾಡೆಲಿಂಗ್‌ಗೆ ಕಾಲಿಟ್ಟ ನಂತರ, ಸಯಾಲಿ ಸಂಜೀವ್ ಅವರು ರಾಜು ಪರ್ಸೇಕರ್ ಅವರ 'ಪೊಲೀಸ್ ಲೈನ್ಸ್ - ಏಕ್ ಪೂರ್ಣ ಸತ್ಯ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದರು. ಇದಲ್ಲದೆ, ಅವರು ಅಟ್ಪಾಡಿ ನೈಟ್ಸ್, ಮನ್ ಫಕೀರಾ, ಎಬಿ ಅಂಡ್  ಸಿಡಿ ಮತ್ತು ದಿ ಸ್ಟೋರಿ ಆಫ್ ಪೈಥಾನಿಯಂತಹ ಚಲನಚಿತ್ರಗಳನ್ನು ಸಹ ಮಾಡಿದ್ದಾರೆ.  

ಸಯಾಲಿ ಸಂಜೀವ್ ಅವರು ಝೀ ಮರಾಠಿಯ ಟಿವಿ ಸರಣಿ 'ಕಹೇ ದಿಯಾ ಪರ್ದೇಸ್' ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದರು, ಅವರ 'ಗೌರಿ' ಪಾತ್ರವು ಜನರಿಂದ ಮೆಚ್ಚುಗೆ ಪಡೆದಿದೆ. 

ಸಯಾಲಿ ಸಂಜೀವ್ ಸಣ್ಣ ಪರದೆಯಲ್ಲಿ 'ಪರ್ಫೆಕ್ಟ್ ಪತಿ', 'ಗುಲ್ಮೊಹರ್' ನಂತಹ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಯಶಸ್ಸನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ಅವರು ‘ಶುಭಮಂಗಳ ಆನ್‌ಲೈನ್’ ಟಿವಿ ಸರಣಿಯಲ್ಲಿ ನಟಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link