ನಿನ್ನೆಯಷ್ಟೇ ಎರಡನೇ ಮದುವೆಯಾದ ನಟ ಸಿದ್ದಾರ್ಥ್ ಮೊದಲ ಪತ್ನಿ ಇವರೇ ! ಕೇವಲ ಇಷ್ಟೇ ದಿನಕ್ಕೆ ಮುರಿದು ಬಿದ್ದಿತ್ತು ಇವರ ವಿವಾಹ !
ನಿನ್ನೆಯಷ್ಟೇ ಸಿದ್ದಾರ್ಥ್ ಮತ್ತು ನಟಿ ಅದಿತಿ ಹೈದರಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ ಅನ್ನುವುದು ವಿಶೇಷ.
2003 ಅಂದರೆ ಸುಮಾರು 21 ವರ್ಷಗಳ ಹಿಂದೆಯೇ ಸಿದ್ದಾರ್ಥ್ ಗೆ ಮೊದಲ ವಿವಾಹ ವಾಗಿತ್ತು. ದೆಹಲಿಯಲ್ಲಿ ತಮ್ಮ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ಮೇಘನಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಸಿದ್ದಾರ್ಥ್.
ಆದ್ರೆ ಅದ್ಯಾಕೋ ಇಬ್ಬರ ಮಧ್ಯೆ ಹೊಂದಾಣಿಕೆ ಕಾಣಿಸಿಕೊಳ್ಳಲೇ ಇಲ್ಲ. ಮದುವೆಯಾದ ತಿಂಗಳುಗಳಲ್ಲಿಯೇ ಇಬ್ಬರ ನಡುವೆ ಜಗಳ ಮನಸ್ತಾಪ ಆರಂಭವಾಗಿತ್ತು.
ಇನ್ನು ಸೈಫ್ ಅಲಿಖಾನ್ ಸಹೋದರಿ ಸೋಹಾ ಅಲಿಖಾನ್ ಜೊತೆಗಿನ ಸಿದ್ದಾರ್ಥ್ ಅತಿಯಾದ ಒಡನಾಟವೇ ಇವರ ಮದುವೆ ಮುರಿದು ಬೀಳಲು ಕಾರಣ ಎಂದು ಕೂಡಾ ಹೇಳಲಾಗಿತ್ತು.
ಈ ಕಾರಣದಿಂದ ಮದುವೆಯಾದ ನಾಲ್ಕೇ ವರ್ಷಕ್ಕೆ ಅಂದರೆ 2007 ರಲ್ಲಿ ಇಬ್ಬರೂ ವಿಚ್ಛೇದನಕ್ಕೆ ನಿರ್ಧರಿಸಿ ಪರಸ್ಪರ ಬೇರೆಯಾಗುತ್ತಾರೆ.
ಇದೀಗ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದ 17 ವರ್ಷಗಳ ಬಳಿಕ ಸಿದ್ದಾರ್ಥ್ ಎರಡನೇ ಸಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.