ಅಕಾಲಿಕ ಬೂದು ಕೂದಲಿಗೆ ಬೆಸ್ಟ್ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!
ಕೂದಲು ಬಿಳಿಯಾಗುವುದು ಬರೀ ವಯಸ್ಸಾದವರ ಸಮಸ್ಯೆಯಲ್ಲ.. ಹದಿಹರೆಯದವರಲ್ಲಿಯೂ ಸಮಸ್ಯೆ ಕಾಡುತ್ತಿದೆ.. ಇದಕ್ಕೆ ಪರಿಹಾರವಾಗಿ ದೇಸಿ ತುಪ್ಪ, ಆಮ್ಲಾ, ಭೃಂಗರಾಜ, ಬ್ರಾಹ್ಮಿ ಮುಂತಾದ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಲು ಪ್ರಾರಂಭಿಸಿ. ಇದರಿಂದ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದಿಲ್ಲ...
ಆಮ್ಲಾ, ಭೃಂಗರಾಜ್, ಬ್ರಾಹ್ಮಿ ಮತ್ತು ಕರಿಬೇವಿನ ಎಲೆಗಳು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ಗುಣಪಡಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು 1 ಚಮಚ ತುಪ್ಪದೊಂದಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸಿ.. ಅಲ್ಲದೇ ಮಲಗುವಾಗ ಹೊಂಕಳಿಗೆ ತುಪ್ಪ ಹಾಕಿಕೊಂಡರೇ ಕೂದಲು ಉತ್ತಮವಾಗಿ ಬೆಳೆಯುತ್ತದೆ..
ನಿಮ್ಮ ಕೂದಲನ್ನು ನಿಯಮಿತವಾಗಿ ಬಾಚಿಕೊಳ್ಳಿ.. ಕೂದಲಿಗೆ ಪೋಷಣೆಯನ್ನು ಒದಗಿಸಲು ಹರ್ಬಲ್ ಹೇರ್ ಮಾಸ್ಕ್‌ಗಳನ್ನು ಬಳಸಿ. ದಾಸವಾಳ, ಕರಿಬೇವಿನ ಸೊಪ್ಪು, ಬೇವು, ಆಮ್ಲಾ, ಬ್ರಾಹ್ಮಿ ಮುಂತಾದ ಪದಾರ್ಥಗಳನ್ನು ಒಳಗೊಂಡಿರುವ ಇಂತಹ ಹೇರ್ ಆಯಿಲ್ ಬಳಸುವುದು ಉತ್ತಮ.. ವಾರಕ್ಕೆ ಒಂದು-ಎರಡು-ಮೂರು ಬಾರಿ ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚಿಕೊಂಡರೇ ಇನ್ನೂ ಒಳ್ಳೆಯದು..
ಎಣ್ಣೆ ಹಚ್ಚುವುದು ನಿಮಗೆ ಸರಿಹೊಂದುವುದಿಲ್ಲವಾದರೆ, ನಿಮ್ಮ ಹೇರ್‌ಮಾಸ್ಕ್‌ನಲ್ಲಿ ದಾಸವಾಳ, ಬೇವು, ಯಸ್ತಿಮಧು, ಬ್ರಾಹ್ಮಿ, ಆಮ್ಲಾ ಮತ್ತು ಭೃಂಗರಾಜದಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ..
ನಿಮ್ಮ ಆಹಾರಕ್ರಮವನ್ನು ಸುಧಾರಿಸಿ. ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳು, ಎಳ್ಳು, ಆಮ್ಲಾ, ಹಾಗಲಕಾಯಿ ಮತ್ತು ಹಸುವಿನ ತುಪ್ಪದಂತಹ ಪೋಷಕಾಂಶಗಳನ್ನು ಸೇರಿಸಿ.
ಬೇಗನೆ ಮಲಗುವುದು ಬಹಳ ಮುಖ್ಯ. ರಾತ್ರಿ 10 ಗಂಟೆಗೆ ಮಲಗಲು ಪ್ರಯತ್ನಿಸಿ. ಇದು ನಿಮ್ಮ ಕೂದಲಿನ ಬೆಳವಣಿಗೆಗೆ ಸಹಕಾರಿ... ಪ್ರಾಣಾಯಾಮ ಮಾಡಿದರೂ ಕೂದಲು ಬೂದು ಬಣ್ಣಕ್ಕೆ ಬರುವುದಿಲ್ಲ, ಆದ್ದರಿಂದ ಪ್ರತಿದಿನ ಬೆಳಿಗ್ಗೆ ಮತ್ತು ಮಲಗುವ ಸಮಯದಲ್ಲಿ ಪ್ರಾಣಾಯಾಮ ಮಾಡಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.