ಏರ್ಪೋರ್ಟ್ ಅನ್ನು ಮೀರಿಸುವಂತಿದೆ ಈ ರೈಲು ನಿಲ್ದಾಣದ Lounge

Thu, 16 Sep 2021-8:23 pm,

ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಅತ್ಯಾಧುನಿಕ ಎಕ್ಸಿಕ್ಯುಟಿವ್ ಲೌಂಜ್ ಅನ್ನು ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಸೇವೆಗಳು ಮತ್ತು ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಈ ಲಾಂಜ್ ಅನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್ ನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಲಾಂಜ್ ಅನ್ನು ದೊಡ್ಡ ಜಾಗ ಮತ್ತು ಶಾಂತ ವಾತಾವರಣದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಎಕ್ಸಿಕ್ಯುಟಿವ್ ಲೌಂಜ್ ನಲ್ಲಿ ಪ್ರಯಾಣಿಕರ ಪ್ರವೇಶಕ್ಕೆ ಅನುಕೂಲವಾಗುವಂತೆ ಪ್ಲಾಟ್ ಫಾರ್ಮ್ ನಂ .1 ರಲ್ಲಿ ಹೊಸ ಕ್ಯಾಪ್ಸುಲ್ ಎಲಿವೇಟರ್ ಅಳವಡಿಸಲಾಗಿದೆ.  

ಹೊಸ ಎಕ್ಸಿಕ್ಯುಟಿವ್ ಲೌಂಜ್ ಪ್ರಯಾಣಿಕರಿಗೆ ಸಂಗೀತ, ವೈ-ಫೈ ಇಂಟರ್ನೆಟ್, ಟಿವಿ, ರೈಲು ಮಾಹಿತಿ ಮಾನಿಟರ್, ತಣ್ಣನೆಯ ಮತ್ತು ಬಿಸಿನೀರು, ಮಲ್ಟಿ-ಕ್ಯೂಸಿನ್ ಬಫೆ, ವಿಶಾಲವಾದ ಲಗೇಜ್ ರ್ಯಾಕ್‌ನಂತಹ ಸೇವೆಗಳನ್ನು ಒದಗಿಸುತ್ತದೆ. ವಾಶ್ ಮತ್ತು ಚೇಂಜ್ ಸೌಲಭ್ಯಗಳನ್ನು ಹೊಂದಿರುವ ಶೌಚಾಲಯಗಳು, ಡಿಸ್ಪ್ಲೇ ಯಲ್ಲಿ ಶೈನರ್‌ಗಳು, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಮತ್ತು ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು, ಫೋಟೊಸ್ಟಾಟ್‌ಗಳು ಮತ್ತು ಫ್ಯಾಕ್ಸ್‌ಗಳು ಸೇರಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಪೂರ್ಣ ಕಾರ್ಯಾಚರಣೆಯ ವಾಣಿಜ್ಯ ಕೇಂದ್ರಬಿಂದುವಾಗಿದೆ. ಪ್ರಯಾಣಿಕರು ಇಲ್ಲಿ ಎಸಿಯಲ್ಲಿ ಕುಳಿತು ಚಹಾ, ಕಾಫಿ ಕುಡಿಯಬಹುದು. 

ಇದಕ್ಕೆ ಒಂದು ಗಂಟೆಗೆ 150 ರೂ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಹೆಚ್ಚುವರಿ ಗಂಟೆಗೆ 99 ರೂ . ಪಾವತಿಸಬೇಕಾಗುತ್ತದೆ.  ಈ . ಲೌಂಜ್ 24x7 ಕಾರ್ಯನಿರ್ವಹಿಸುತ್ತದೆ.  

ಸ್ವಚ್ಛ ಶೌಚಾಲಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಸಾಮಾನ್ಯ ಶುಲ್ಕದಲ್ಲಿ ನೀಡಲಾಗುವುದು.  ಟವೆಲ್‌ಗಳು, ಸೋಪ್, ಶಾಂಪೂ, ಶವರ್ ಕ್ಯಾಪ್ ಮತ್ತು ಡೆಂಟಲ್ ಕಿಟ್ ಒಳಗೊಂಡಂತೆ 200+ ಕ್ಲೀನ್ ಶೌಚಾಲಯಗಳಿವೆ.  

ಐಆರ್‌ಸಿಟಿಸಿ ವಿಶೇಷ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ವಿಶೇಷ ಬಫೆಗಳ ರೂಪದಲ್ಲಿ ನೀಡುತ್ತದೆ, ಇದು ಕೈಗೆಟುಕುವ ಬೆಲೆಯಲ್ಲಿರುತ್ತದೆ. ಈ ಬೆಲೆ ಪ್ರತಿ ವ್ಯಕ್ತಿಗೆ 250 ರೂ. ಯಿಂದ  385 ರೂ ಎಂದು ನಿಗದಿ ಮಾಡಲಾಗಿದೆ. ಐಆರ್‌ಸಿಟಿಸಿಯ ಇತರ ಪಾವತಿ ಸೇವೆಗಳಲ್ಲಿ ಮಸಾಜ್ ಕುರ್ಚಿಯಂತಹ ಸೌಲಭ್ಯಗಳು ಸೇರಿವೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link