ಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !

Thu, 23 May 2024-10:46 am,

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 2024 ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಪಂದ್ಯದ ವೇಳೆ ನಟ ಶಾರುಖ್ ಹೀಟ್ ಸ್ಟ್ರೋಕ್‌ಗೆ ಒಳಗಾದರು. 

ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶಾರುಖ್‌ ಖಾನ್ ಮಕ್ಕಳಾದ ಸುಹಾನಾ‌, ಅಬ್‌ರಾಮ್ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ಪಂದ್ಯ ವೀಕ್ಷಿಸಲು ಶಾರುಖ್‌ ಬಂದಿದ್ದರು.

ಶಾರುಖ್‌ ಖಾನ್ ಅಸ್ವಸ್ಥರಾಗುತ್ತಿದ್ದಂತೆ ಐಪಿಎಲ್ ತಂಡದ ಕೆಕೆಆರ್‌ನ ಸಹ-ಮಾಲೀಕರಾಗಿರುವ ಜೂಹಿ ಚಾವ್ಲಾ ಮತ್ತು ಪತಿ ಜಯ್ ಮೆಹ್ತಾ ಸಹ ಎಸ್‌ಆರ್‌ಕೆ ಜತೆ ಆಸ್ಪತ್ರೆಗೆ ಹೋಗಿದ್ದಾರೆ. 

ಆಸ್ಪತ್ರೆಯ ಹೊರಗೆ ನಿಂತಿದ್ದ ವರದಿಗಾರರು ಮತ್ತು ಛಾಯಾಗ್ರಾಹಕರೊಂದಿಗೆ ಈ ವೇಳೆ ನಟಿ ಜೂಹಿ ಚಾವ್ಲಾ ಮಾತನಾಡಿದರು. 

"ಶಾರುಖ್ ಆರೋಗ್ಯದಲ್ಲಿ ಕಳೆದ ರಾತ್ರಿ ಏರುಪೇರಾಗಿದೆ. ಅವರನ್ನು ಆಸ್ಪತ್ರೆಗೆ ಕರೆತಂದಿದ್ದೇವೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ದೇವರ ದಯೆಯಿಂದ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ. ಐಪಿಎಲ್‌ ಫೈನಲ್‌ ಪಂದ್ಯವನ್ನು ವೀಕ್ಷಿಸಲು ಸಹ ಆಗಮಿಸಬಹುದು" ಎಂದು ನಟಿ ಜೂಹಿ ಚಾವ್ಲಾ ಹೇಳಿದರು. 

ಪತ್ನಿ ಗೌರಿ ಖಾನ್ ಸಹ ಕೂಡಲೇ ಆಸ್ಪತ್ರೆಗೆ ಆಗಮಿಸಿದರು. ಶಾರುಖ್‌ ಮಗಳು ಸುಹಾನಾ ಖಾನ್ ಅವರು ಆಪ್ತರಾದ ಅನನ್ಯ ಪಾಂಡೆ, ಶನಯಾ ಕಪೂರ್ ಮತ್ತು ನವ್ಯಾ ನಂದಾ ಅವರೊಂದಿಗೆ ಮುಂಬೈಗೆ ಮರಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link