ಪಾತಾಳಕ್ಕೆ ಕುಸಿದ ಬಂಗಾರದ ಬೆಲೆ !ಇನ್ನು ಬಂಗಾರ ಬಲು ಅಗ್ಗ! ಚಿನ್ನದ ದರ ಇಳಿಕೆ ಹಿಂದಿರುವುದು ಡಾಲರ್ ಮಹಿಮೆ
ಅಮೆರಿಕ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಚಿನ್ನದ ಬೆಲೆ ಕುಸಿಯುತ್ತಲೇ ಇದೆ. ಬಂಗಾರ ಖರೀದಿ ಇನ್ನು ಸಾಧ್ಯವೇ ಎಂದು ಚಿಂತೆ ಮಾಡುತ್ತಿದ್ದವರಿಗೆ ಇದು ನೆಮ್ಮದಿಯ ವಿಚಾರ.
ಇಡೀ ಜಗತ್ತಿನ ಆರ್ಥಿಕತೆಯ ಹಾದಿಯನ್ನು ಸೂಪರ್ ಪವರ್ ಅಮೆರಿಕ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಅದನ್ನು ಚಿನ್ನ ಬೆಳ್ಳಿ ಬೆಲೆಯಲ್ಲಿಯೂ ಕಾಣಬಹುದು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಮಾರುಕಟ್ಟೆಯ ಅಸ್ಥಿರತೆ ಸ್ಪಷ್ಟವಾಗಿ ಗೋಚರಿಸಿತು.
ಅಮೆರಿಕದಲ್ಲಿ ಅಧ್ಯಕ್ಷ ಗಾದಿ ಯಾರ ಕೈಗೆ ಬರುತ್ತದೆ ಎಂಬುದು ಸ್ಪಷ್ಟವಾಗುವವರೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರುತ್ತಲೇ ಇದ್ದವು. ಹಾಗಾಗಿ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 80,000 ರೂ.ಗಡಿ ದಾಟಿತ್ತು. ಅಮೆರಿಕ ಸಾರಥ್ಯ ಡೊನಾಲ್ಡ್ ಟ್ರಂಪ್ ಕೈಗೆ ಮರಳುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದ್ದ ಹಾಗೆಯೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತದೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಪಟ್ಟಕ್ಕೆ ಮರಳಿರುವುದು ಡಾಲರ್ ಅನ್ನು ಬಲಪಡಿಸಿದೆ.ಇದು ಚಿನ್ನದ ಬೆಲೆ ಇಳಿಯುವುದಕ್ಕೆ ಕಾರಣವಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಟ್ರಂಪ್ ಗೆಲುವು ಡಾಲರ್ ಸೂಚ್ಯಂಕ ಮತ್ತು ಬಾಂಡ್ ಈಲ್ದ್ ಅನ್ನು ಹೆಚ್ಚಿಸಿದೆ.
ಟ್ರಂಪ್ ಜಯಭೇರಿ ಬಾರಿಸಿದ ನಂತರ, ಹೂಡಿಕೆದಾರರು ಭಾರಿ ಲಾಭವನ್ನು ಗಳಿಸುತ್ತಿದ್ದಾರೆ. ಇದರ ಪರಿಣಾಮ ಚಿನ್ನದ ಬೆಲೆಗಳ ಮೇಲೆ ಗೋಚರಿಸಿದೆ. ಟ್ರಂಪ್ ವಿಜಯದ ನಂತರ, ಬಿಟ್‌ಕಾಯಿನ್ ಮತ್ತು ಷೇರು ಮಾರುಕಟ್ಟೆಗಳಂತಹ ಆಸ್ತಿಗಳ ಕಡೆಗೆ ಬಂಡವಾಳದ ಹರಿವಿನಿಂದಾಗಿ ಚಿನ್ನದ ಹೂಡಿಕೆಯ ಆಕರ್ಷಣೆ ಕಡಿಮೆಯಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ ಚಿನ್ನದ ಬೆಲೆ ಕುಸಿತಕ್ಕೆ ಇದೇ ಪ್ರಮುಖ ಇದೇ ಆಗಿದೆ. ಆದರೆ ಇದು ತಾತ್ಕಾಲಿಕ ಕುಸಿತ. ಬೇಡಿಕೆಯೊಂದಿಗೆ ಬೆಲೆಗಳು ಮತ್ತೆ ಏರುತ್ತವೆ.