Slowest Train: ಇದು ಭಾರತದಲ್ಲಿ ಅತೀ ನಿಧಾನವಾಗಿ ಓಡೋ ರೈಲು! ವೇಗ ಕಡಿಮೆಯಾದರೂ ‘ಯುನೆಸ್ಕೋ’ ಪಟ್ಟಿ ಸೇರಿದೆ ಈ ಟ್ರೈನ್…

Fri, 10 Mar 2023-3:38 pm,

ಭಾರತೀಯ ರೈಲ್ವೇ ಬಗ್ಗೆ ನೀಡುವ ಪ್ರತೀ ಮಾಹಿತಿಯು ಜನರಿಗೆ ಪ್ರಯೋಜನಕಾರಿಯಾಗಿರುತ್ತದೆ. ಈ ಸಂಚಿಕೆಯಲ್ಲಿ ದೇಶದ ಅತ್ಯಂತ ನಿಧಾನವಾದ ರೈಲಿನ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದು, ಇದರ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಇನ್ನು ವಿಶೇಷವೆಂದರೆ ಈ ರೈಲು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಾರೆ.

ಭಾರತದಲ್ಲಿ ಅತ್ಯಂತ ನಿಧಾನಗತಿಯ ರೈಲು ಯಾವುದು ಎಂದು ಇಂದು ತಿಳಿಯೋಣ. ಇದು ತುಂಬಾ ನಿಧಾನವಾಗಿ ಚಲಿಸುತ್ತದೆ. ಈ ರೈಲಿನ ಹೆಸರನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ವಿಶೇಷವೆಂದರೆ ನಿಧಾನಗತಿಯಲ್ಲಿ ಓಡಿದರೂ ಈ ರೈಲು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಈ ರೈಲಿನ ಹೆಸರು 'ಮೆಟ್ಟುಪಾಳ್ಯಂ ಊಟಿ ನೀಲಗಿರಿ ಪ್ಯಾಸೆಂಜರ್ ರೈಲು'. ಈ ರೈಲು ಸಂಚರಿಸುವಾಗ 326 ಮೀಟರ್ ಎತ್ತರದಿಂದ 2203 ಮೀಟರ್ ಎತ್ತರಕ್ಕೆ ಚಲಿಸುತ್ತದೆ. ನೀಲಗಿರಿ ಮೌಂಟೇನ್ ರೈಲ್ವೆ ಅಡಿಯಲ್ಲಿ ಬರುವ ಈ ರೈಲು 46 ಕಿಲೋಮೀಟರ್ ದೂರವನ್ನು 5 ಗಂಟೆಗಳಲ್ಲಿ ಕ್ರಮಿಸುತ್ತದೆ.

ಹಲವು ವರ್ಷಗಳಿಂದ ಈ ರೈಲು ಹೀಗೆಯೇ ಓಡುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ರೈಲು ಸಂಪೂರ್ಣವಾಗಿ ಮೊದಲ ಮತ್ತು ಎರಡನೇ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಈ ರೈಲು ವೆಲ್ಲಿಂಗ್ಟನ್, ಕೂನೂರು, ಕೆಟಿ, ಲವ್‌ ಡೇಲ್ ಮತ್ತು ಅರವಣಕಾಡು ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ. ಈ 46 ಕಿಮೀ ಪ್ರಯಾಣದಲ್ಲಿ, 100 ಕ್ಕೂ ಹೆಚ್ಚು ಸೇತುವೆಗಳು ಮತ್ತು ಅನೇಕ ಸಣ್ಣ ಮತ್ತು ದೊಡ್ಡ ಸುರಂಗಗಳು ಸಹ ಕಂಡುಬರುತ್ತವೆ.

ಇದಾದ ನಂತರ ಮಧ್ಯಾಹ್ನ 2 ಗಂಟೆಯಿಂದ ಊಟಿಯಿಂದ ಹೊರಟು ಸಂಜೆ 5:30ಕ್ಕೆ ಮತ್ತೆ ಮೆಟ್ಟುಪಾಳ್ಯಂ ನಿಲ್ದಾಣಕ್ಕೆ ಬರುತ್ತದೆ. ಈ ರೈಲಿನಲ್ಲಿ ಪ್ರಥಮ ದರ್ಜೆ ಟಿಕೆಟ್‌ಗೆ 545 ರೂ., ಎರಡನೇ ದರ್ಜೆಯ ಟಿಕೆಟ್‌ಗೆ 270 ರೂ. ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link