ಇದುವೇ ನೋಡಿ ವಿಶ್ವದ ಅತ್ಯಂತ ಚಿಕ್ಕ ದೇಶ: ಇಲ್ಲಿ ಎಷ್ಟು ಜನ ವಾಸಿಸುತ್ತಿದ್ದಾರೆ ಗೊತ್ತಾ..?

Sun, 05 Dec 2021-12:34 pm,

ಈ ದೇಶದ ಹೆಸರು ಸೀಲ್ಯಾಂಡ್. ಇದನ್ನು ಮೈಕ್ರೋ ನೇಷನ್ ಎಂತಲೂ ಕರೆಯುತ್ತಾರೆ. ಈ ದೇಶವು ಇಂಗ್ಲೆಂಡ್ ಬಳಿ ಇದೆ. ಇಂಗ್ಲೆಂಡಿನ ಸಫೊಲ್ಕ್ ಸಮುದ್ರ ತೀರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಸೀಲ್ಯಾಂಡ್ 2ನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ನಿರ್ಮಿಸಿದ ಪಾಳುಬಿದ್ದ ಸಮುದ್ರ ಕೋಟೆಯ ಮೇಲೆ ನೆಲೆಗೊಂಡಿದೆ.

ಮೈಕ್ರೋ ನೇಷನ್ ಎಂಬ ಸೀಲ್ಯಾಂಡ್ ಅನ್ನು ಅನೇಕ ಜನರು ಆಕ್ರಮಿಸಿಕೊಂಡಿದ್ದರು. 2012ರ ಅಕ್ಟೋಬರ್ 9ರಂದು ರಾಯ್ ಬೇಟ್ಸ್ ಎಂಬ ವ್ಯಕ್ತಿ ತನ್ನನ್ನು ಸೀಲ್ಯಾಂಡ್ ರಾಜಕುಮಾರ ಎಂದು ಘೋಷಿಸಿಕೊಂಡರು. ಈತನ ಮರಣದ ನಂತರ ಆತನ ಮಗ ಮೈಕೆಲ್ ಸದ್ಯ ಪುಟ್ಟ ದೇಶದ ದೊರೆಯಾಗಿದ್ದಾನೆ. ರಾಯ್ ಬೇಟ್ಸ್ ಸೀಲ್ಯಾಂಡ್‌ಗಾಗಿ ತನ್ನದೇ ಆದ ಅಂಚೆ ಚೀಟಿಗಳು, ಪಾಸ್‌ಪೋರ್ಟ್‌ಗಳು ಮತ್ತು ಕರೆನ್ಸಿಯನ್ನು ರೂಪಿಸಿದ್ದನು. ಈ ದೇಶದ ಕರೆನ್ಸಿಯು ರಾಯ್ ಬೇಟ್ಸ್ ಅವರ ಪತ್ನಿ ಜಾನ್ ಬೇಟ್ಸ್ ಅವರ ಚಿತ್ರವನ್ನು ಹೊಂದಿದೆ. ಈ ದೇಶವು ತನ್ನದೇ ಆದ ಧ್ವಜವನ್ನು ಸಹ ಹೊಂದಿದ್ದು, ಇದು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣವನ್ನು ಹೊಂದಿದೆ.

ಈ ಪುಟ್ಟ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ದೇಣಿಗೆಯ ಮೇಲೆ ಅವಲಂಬಿತವಾಗಿದೆ. ಆದರೆ ಈಗ ಈ ಪುಟ್ಟ ದೇಶದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸಾವಿರಾರು ಜನರು ಪ್ರವಾಸೋದ್ಯಮಕ್ಕೂ ಇಲ್ಲಿಗೆ ಆಗಮಿಸುತ್ತಿದ್ದಾರೆ. ಸೀಲ್ಯಾಂಡ್ ಪ್ರದೇಶವು ತುಂಬಾ ಚಿಕ್ಕದಾಗಿದೆ. ಆದ್ದರಿಂದ ಪ್ರವಾಸಿಗರು ಮೊದಲ ಬಾರಿಗೆ ಇಂಟರ್ನೆಟ್ ಮೂಲಕ ಈ ದೇಶದ ಬಗ್ಗೆ ತಿಳಿದಾಗ ಅವರು ಸಾಕಷ್ಟು ದೇಣಿಗೆ ನೀಡಿದರು. ಇದರಿಂದ ಇಲ್ಲಿ ವಾಸಿಸುವವರಿಗೆ ಆರ್ಥಿಕ ನೆರವು ದೊರೆಯುತ್ತಿದೆ.

ಸೀಲ್ಯಾಂಡ್ ನ ಮೇಲ್ಮೈ ವಿಸ್ತೀರ್ಣ 6000 ಚದರ ಅಡಿಗಳಷ್ಟು ಹರಡಿಕೊಂಡಿದೆ. ಈ ದೇಶವು ತುಂಬಾ ಚಿಕ್ಕದಾಗಿದೆ, ನೀವು ಅದನ್ನು Google ನಕ್ಷೆಗಳಲ್ಲಿ ಹುಡುಕಲು ಸಾಧ್ಯವಿಲ್ಲ. 2ನೇ ಮಹಾಯುದ್ಧದ ಸಮಯದಲ್ಲಿ ಈ ಸ್ಥಳವನ್ನು ಬ್ರಿಟನ್ ದೇಶವು ತನ್ನ ವಿಮಾನ ವಿರೋಧಿ ರಕ್ಷಣಾತ್ಮಕ ಗನ್ ವೇದಿಕೆ(Anti-Aircraft Defensive Gun Platform)ಯಾಗಿ ನಿರ್ಮಿಸಿದೆ ಎಂದು ನಂಬಲಾಗಿದೆ. 2011ರ ಅಂಕಿಅಂಶಗಳ ಪ್ರಕಾರ ಸೀಲ್ಯಾಂಡ್ ಜನಸಂಖ್ಯೆಯು ಕೇವಲ 27 ಜನರು ಮಾತ್ರ.

ಸೀಲ್ಯಾಂಡ್ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿಲ್ಲ. ಈ ಕಾರಣಕ್ಕಾಗಿಯೇ ಸದ್ಯ ವಿಶ್ವದ ಅತ್ಯಂತ ಚಿಕ್ಕ ದೇಶವೆಂಬ ಹೆಗ್ಗಳಿಕೆಯು ವ್ಯಾಟಿಕನ್ ಸಿಟಿಯ ಪಾಲಾಗಿದೆ. ವ್ಯಾಟಿಕನ್ ಸಿಟಿಯು 0.44 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಇಲ್ಲಿನ ಜನಸಂಖ್ಯೆ ಕೇವಲ 800 ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link